ನವದೆಹಲಿ: ಗಣರಾಜ್ಯೋತ್ಸವದಂದು ರಾಜಪಥದಲ್ಲಿ ನಡೆಯುವ ಪರೇಡ್ ಯಾವಾಗಲೂ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ. ಈ ವರ್ಷ ಜನವರಿ 26 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ 75 ವಿಮಾನಗಳು ರಾಜಪಥದಲ್ಲಿ ಹಾರಾಟ ನಡೆಸಲಿವೆ ಎಂದು ಭಾರತೀಯ ವಾಯುಸೇನೆಯ ಪ್ರೊ ವಿಂಗ್ ಕಮಾಂಡರ್ ಇಂದ್ರನಿಲ್ ನಂದಿ ತಿಳಿಸಿದ್ದಾರೆ.
ಐದು ರಫೇಲ್ ಜೆಟ್ಗಳು ವಿನಾಶ ರಚನೆಯಲ್ಲಿ ಹಾರಾಟ ನಡೆಸಲಿವೆ. ಮೊದಲ ಬಾರಿಗೆ ನೌಕಾಪಡೆಯ MiG29K ಮತ್ತು P8I ವಿಮಾನಗಳು ಸಹ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
“ಐಎಎಫ್, ಸೇನೆ ಮತ್ತು ನೌಕಾಪಡೆಯ ವಿಮಾನಗಳು ಸೇರಿದಂತೆ 75 ವಿಮಾನಗಳೊಂದಿಗೆ ಗಣರಾಜ್ಯೋತ್ಸವದ ಪರೇಡ್ನಲ್ಲಿ ರಾಜಪಥದಲ್ಲಿ ಈ ಬಾರಿ ಅತ್ಯಂತ ಭವ್ಯವಾದ ಫ್ಲೈಪಾಸ್ಟ್ ನಡೆಯಲಿದೆ. ಇದು ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಗೆ ಅನುಗುಣವಾಗಿದೆ” ಎಂದು ಇಂದ್ರನೀಲ್ ಹೇಳಿದ್ದಾರೆ.
“ವಿನಾಶ್ ರಚನೆಯಲ್ಲಿ ರಾಜಪಥದ ಮೇಲೆ ಹಾರಲು ಐದು ರಫೇಲ್ ಸಿದ್ಧವಾಗಿದೆ. ನೌಕಾಪಡೆಯ MiG29K ಮತ್ತು P-8I ಕಣ್ಗಾವಲು ವಿಮಾನಗಳು ವರುಣಾ ರಚನೆಯಲ್ಲಿ ಹಾರಾಟ ನಡೆಸಲಿವೆ. 17 ಜಾಗ್ವಾರ್ ಯುದ್ಧ ವಿಮಾನಗಳು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು 75 ರ ಆಕಾರದಲ್ಲಿ ಹಾರುತ್ತವೆ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪರಿಸ್ಥಿತಿಯಿಂದಾಗಿ, ಈ ವರ್ಷ ಸುಮಾರು 24,000 ಜನರಿಗೆ ಮಾತ್ರ ಗಣರಾಜ್ಯೋತ್ಸವ ಪರೇಡ್ಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.