ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಭಾರತೀಯರು ಅದರಲ್ಲೂ ಬಹುತೇಕ ಮಹಿಳೆಯರು ಶಾಲೆಯ ಮಟ್ಟಿಲು ಹತ್ತಿಲ್ಲ ಅಥವಾ ಯಾವುದೇ ಸಾಕ್ಷರತಾ ಕೇಂದಕ್ಕೆ ಹೋಗಿಲ್ಲ ಎಂಬುದನ್ನು 2011ರ ಶೈಕ್ಷಣಿಕ ಸಂಸ್ಥೆಗೆ ಹಾಜರಾದ ಜನರು ಸೆನ್ಸಸ್ನ ವರದಿಯಿಂದ ತಿಳಿದು ಬಂದಿದೆ.
ಒಟ್ಟು ಜನಸಂಖ್ಯೆಯ ಶೇ.41.4ರಷ್ಟು ಜನರು ಯಾವುದೇ ಶೈಕ್ಷಣಿಕ ಸಂಸ್ಥೆಗಳಿಗೆ ಹಾಜರಾಗಿಲ್ಲ, ಇವರಲ್ಲಿ ಹೆಚ್ಚಿನವರು(8.10 ಕೋಟಿ) ಉತ್ತರಪ್ರದೇಶದವರು, ನಂತರದ ಸ್ಥಾನ ಬಿಹಾರ (4.88 ಕೋಟಿ), ನಂತರ ಆಂಧ್ರ(3.16ಕೋಟಿ), ರಾಜಸ್ಥಾನ(2.87 ಕೋಟಿ), ಪಶ್ಚಿಮಬಂಗಾಳ(2.79 ಕೋಟಿ), ಮಧ್ಯಪ್ರದೇಶ(2.74 ಕೋಟಿ) ಮತ್ತು ಮಹಾರಾಷ್ಟ್ರ (2.72 ಕೋಟಿ) ಎಂದು ತಿಳಿದು ಬಂದಿದೆ.
ಒರಿಸ್ಸಾದ ಶೇ.33.43ರಷ್ಟು ಜನ, ಕರ್ನಾಟಕದ 31.24ರಷ್ಟು ಜನ, ಪಶ್ಚಿಮಬಂಗಾಳದ ಶೇ.30.59ರಷ್ಟು ಜನ, ಗುಜರಾತಿನ ಶೇ.29.38ರಷ್ಟು ಜನ, ತಮಿಳುನಾಡಿನ ಶೇ.25.02ರಷ್ಟು ಜನ ಶಾಲಾ ಮೆಟ್ಟಿಲು ಏರಿಲ್ಲ.
ಸಾಕ್ಷರತಾ ಪ್ರಮಾಣ ಅತ್ಯಧಿಕವಿರುವ ಕೇರಳದಲ್ಲಿ ಶೇ.13.11ರಷ್ಟು ಜನ ಶಾಲಾ ಮೆಟ್ಟಿಲನ್ನು ಏರಿಲ್ಲ ಎಂದು ತಿಳಿದು ಬಂದಿದೆ.
ಎಲ್ಲಾ ರಾಜ್ಯಗಳಲ್ಲೂ ಬಹುತೇಕ ಮಹಿಳೆಯರೇ ಅನಕ್ಷರಸ್ಥರಾಗಿದ್ದಾರೆ. ಶೇ.41.4ರಷ್ಟು ಅನಕ್ಷರಸ್ಥರಲ್ಲಿ ಶೇ.24.23ರಷ್ಟು ಮಹಿಳೆಯರೇ ಆಗಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.