ನವದೆಹಲಿ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT) ಸಹಾಯದಿಂದ ಹೊಸ ಸೇನಾ ಯುದ್ಧ ಮಾದರಿ ಸಮವಸ್ತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಗುರುವಾರ ಮಾಹಿತಿ ನೀಡಿವೆ. 15 ಮಾದರಿಗಳು, ಎಂಟು ವಿನ್ಯಾಸಗಳು ಮತ್ತು ನಾಲ್ಕು ಬಟ್ಟೆಗಳ ಆಯ್ಕೆಗಳನ್ನು ಪರಿಶೀಲಿಸಿದ ನಂತರ ಇದನ್ನು ಅಭಿವೃದ್ಧಿಡಪಡಿಸಲಾಗಿದೆ.
ಸೇನಾ ದಿನದಂದು ಅಂದರೆ ಜನವರಿ 15 ರಂದು, ಭಾರತೀಯ ಸೇನೆಯು ತನ್ನ ಹೊಸ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಲು ಸಜ್ಜಾಗಿದೆ, ಇದನ್ನು NIFT ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಕಳೆದ ತಿಂಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಧ್ಯಕ್ಷ ಡಾ ಜಿ ಸತೀಶ್ ರೆಡ್ಡಿ ಅವರು ನವದೆಹಲಿಯಲ್ಲಿ ಐದು ಭಾರತೀಯ ಕಂಪನಿಗಳಿಗೆ ಭಾರತ ನಿರ್ಮಿತ ತೀವ್ರ ಶೀತ ಹವಾಮಾನದ ಬಟ್ಟೆ ವ್ಯವಸ್ಥೆ (Extreme cold weather clothing system (ECWS) ) ತಂತ್ರಜ್ಞಾನವನ್ನು ಹಸ್ತಾಂತರಿಸಿದ್ದರು. ECWS ಅನ್ನು ಭಾರತೀಯ ಸೇನೆಯು ಹಿಮಾಲಯ ಶಿಖರಗಳು ಮತ್ತು ಹಿಮನದಿಗಳಲ್ಲಿ ತನ್ನ ನಿರಂತರ ಕಾರ್ಯಾಚರಣೆಗಾಗಿ ಬಳಸುತ್ತದೆ.
ಇನ್ನೊಂದೆಡೆ ಮೂಲಗಳು ಎರಡು ಸಮವಸ್ತ್ರದ ಚಿತ್ರವನ್ನು ಹಂಚಿಕೊಂಡಿದ್ದು, ಒಂದು ಭಾರತೀಯ ಸೇನೆಯ ಮತ್ತು ಇನ್ನೊಂದು ಎಲ್ಟಿಟಿಇಯದ್ದು. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ ಮತ್ತು ಸತ್ಯಗಳನ್ನು ವಿರೂಪಗೊಳಿಸಲು ಸಮವಸ್ತ್ರದ ಚಿತ್ರದ ಮೇಲೆ ಫಿಲ್ಟರ್ಗಳನ್ನು ಬಳಸಲಾಗುತ್ತಿದೆ ಎಂದು ಎಚ್ಚರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.