ನವದೆಹಲಿ: ಭಾರತದಲ್ಲಿ ಆಟೋಮೊಬೈಲ್ ಮತ್ತು ಆಟೋ ಬಿಡಿಭಾಗಗಳ ಉದ್ಯಮಕ್ಕಾಗಿ 25, 938 ಕೋಟಿ ರೂಪಾಯಿಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯಡಿಯಲ್ಲಿ ಒಟ್ಟು 115 ಕಂಪನಿಗಳು ತಮ್ಮ ಅರ್ಜಿಯನ್ನು ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.
ಭಾರತದ ವಾಹನ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸರ್ಕಾರವು ಅನುಮೋದಿಸಿದ ಈ ಯೋಜನೆಯು 9 ಜನವರಿ 2022 ರವರೆಗೆ ಅರ್ಜಿಗಳನ್ನು ಸ್ವೀಕರಿಸಲು ಮುಕ್ತವಾಗಿದೆ.
ಆಟೋ ಪಿಎಲ್ಐ ಯೋಜನೆಯು 25,938 ಕೋಟಿ ರೂಪಾಯಿಗಳ ಆಯವ್ಯಯ ವೆಚ್ಚದೊಂದಿಗೆ, ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ಉತ್ಪನ್ನಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ವಾಹನ ಉತ್ಪಾದನಾ ಮೌಲ್ಯ ಸರಪಳಿಯಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸಂಸ್ಥೆಗಳಿಗೆ ಹಣಕಾಸಿನ ಪ್ರೋತ್ಸಾಹವನ್ನು ಪ್ರಸ್ತಾಪಿಸುತ್ತದೆ.
1 ಏಪ್ರಿಲ್ 2022 ರಿಂದ ಸತತ 5 ವರ್ಷಗಳವರೆಗೆ ಭಾರತದಲ್ಲಿ ತಯಾರಿಸಲಾಗುವ ಅಡ್ವಾನ್ಸ್ಡ್ ಆಟೋಮೋಟಿವ್ ಟೆಕ್ನಾಲಜಿ (ಎಎಟಿ) ಉತ್ಪನ್ನಗಳ (ವಾಹನಗಳು ಮತ್ತು ಘಟಕಗಳು) ನಿರ್ಧಾರಿತ ಮಾರಾಟಕ್ಕಾಗಿ ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಕಗಳು ಅನ್ವಯವಾಗುತ್ತವೆ ಎಂದು ಭಾರೀ ಕೈಗಾರಿಕೆಗಳ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಯೋಜನೆಯ ಪ್ರಧಾನ ಉದ್ದೇಶಗಳು ವೆಚ್ಚದ ಅಸಾಮರ್ಥ್ಯಗಳನ್ನು ನಿವಾರಿಸುವುದು, ಸೂಕ್ತ ಪ್ರಮಾಣದ ಆರ್ಥಿಕತೆಯನ್ನು ರಚಿಸುವುದು ಮತ್ತು ಸುಧಾರಿತ ಆಟೋಮೋಟಿವ್ ಟೆಕ್ನಾಲಜಿ ಉತ್ಪನ್ನಗಳ ಕ್ಷೇತ್ರಗಳಲ್ಲಿ ದೃಢವಾದ ಪೂರೈಕೆ ಸರಪಳಿಯನ್ನು ನಿರ್ಮಿಸುವುದು ಸೇರಿದೆ. ಇದರಿಂದ ಉದ್ಯೋಗವೂ ಸೃಷ್ಟಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.