ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ರಾಷ್ಟ್ರಕ್ಕೆ ಐತಿಹಾಸಿಕ ಬಂಗಾರದ ಗೌರವ ತಂದುಕೊಟ್ಟ ‘ಗೋಲ್ಡನ್ ಬಾಯ್’ ನೀರಜ್ ಚೋಪ್ರಾ ಅವರಿಗೆ ವಿಶ್ವದ ಅತಿದೊಡ್ಡ ಅಂಚೆ ನೆಟ್ವರ್ಕ್ ಭಾರತೀಯ ಅಂಚೆ ವಿಶೇಷ ಗೌರವವನ್ನು ನೀಡಿದೆ.
ನೀರಜ್ ಅವರ ತವರೂರು ಹರಿಯಾಣದಲ್ಲಿ ಭಾರತೀಯ ಅಂಚೆ ಚಿನ್ನದ ಲೆಟರ್ ಬಾಕ್ಸ್ ಅನ್ನು ಸ್ಥಾಪಿಸಿದೆ. ಬಂಗಾರ ಗೆದ್ದ ಯುವಕನಿಗೆ ಇದು ಬಂಗಾರದಂತಹ ಗೌರವವಾಗಿದೆ.
ಟೋಕಿಯೋ ಗೇಮ್ಸ್ 2020 ರ ಪುರುಷರ ಜಾವೆಲಿನ್ ಸ್ಪರ್ಧೆಯ ಫೈನಲ್ನಲ್ಲಿ ನೀರಜ್ 87.58 ಎಸೆತಗಳನ್ನು ಎಸೆದು ಐತಿಹಾಸಿಕ ಚಿನ್ನದ ಪದಕವನ್ನು ಗಳಿಸುವಲ್ಲಿ ಯಶಸ್ವಿಯಾದರು.
“ಟೋಕಿಯೊ ಒಲಿಂಪಿಕ್ಸ್ 2020ರ ಜಾವೆಲಿನ್ ಥ್ರೋ ಗೋಲ್ಡ್ ಮೆಡಲ್ ವಿಜೇತ ನೀರಜ್ ಚೋಪ್ರಾ ಅವರ ಗೌರವಾರ್ಥ” ಎಂದು ಭಾರತೀಯ ಅಂಚೆ ಕಸ್ಟಮೈಸ್ ಮಾಡಿದ ಲೆಟರ್ಬಾಕ್ಸ್ನಲ್ಲಿ ವಿಶೇಷ ಸಂದೇಶವನ್ನು ಬರೆದಿದೆ. ನೀರಜ್ಗಾಗಿ ಭಾರತೀಯ ಪೋಸ್ಟ್ನ ಅದ್ಭುತ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
So this is what caught my eye. @IndiaPostOffice commemorated Neeraj Chopra’s Javelin Throw gold medal in the Tokyo Olympic Games by installing this unique Post Box in his village, perhaps less than 87.58m from his home. https://t.co/237qjbD4pE pic.twitter.com/k1plpj054A
— G Rajaraman (@g_rajaraman) January 8, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.