ನವದೆಹಲಿ: ಭಾರತದ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ ಡಿಸೆಂಬರ್ನಲ್ಲಿ 74.78 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ, ಕ್ಯಾಪ್ಟಿವ್ ಮೈನ್ಸ್ ದಾಖಲೆಯ ಶೇ. 40.98ರಷ್ಟು ಬೆಳವಣಿಗೆ ಕಂಡಿದೆ ಎಂದು ಸರ್ಕಾರ ತಿಳಿಸಿದೆ.
2019 ರ ಇದೇ ಅವಧಿಗೆ ಹೋಲಿಸಿದರೆ 2021 ರ ಡಿಸೆಂಬರ್ನಲ್ಲಿ ಭಾರತದ ಒಟ್ಟು ಕಲ್ಲಿದ್ದಲು ಉತ್ಪಾದನೆಯು ಶೇಕಡಾ 6.74 ರಷ್ಟು ಅಂದರೆ 74.78 ಮಿಲಿಯನ್ ಟನ್ಗಳಿಗೆ (MT) ಹೆಚ್ಚಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆ ತಿಳಿಸಿದೆ.
“ಕಳೆದ ವರ್ಷದ ಡಿಸೆಂಬರ್ನಲ್ಲಿನ ಒಟ್ಟು ಉತ್ಪಾದನೆಯಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 60.220 MT ಉತ್ಪಾದಿಸುವ ಮೂಲಕ 3.79 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ. ಕ್ಯಾಪ್ಟಿವ್ ಬ್ಲಾಕ್ಗಳು ಈ ಅವಧಿಯಲ್ಲಿ 8.91 MT ಕಲ್ಲಿದ್ದಲನ್ನು ಉತ್ಪಾದಿಸುವ ಮೂಲಕ 40.98 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ” ಎಂದು ಕಲ್ಲಿದ್ದಲು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ಸಮಯದಲ್ಲಿ, ಸಿಂಗರೇಣಿ ಕಾಲೀಯರೀಸ್ ಲಿಮಿಟೆಡ್ (SCCL) ಡಿಸೆಂಬರ್ನಲ್ಲಿ 5.65 MT ಕಲ್ಲಿದ್ದಲು ಉತ್ಪಾದಿಸುವ ಮೂಲಕ 1.12 ಶೇಕಡಾ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
2019 ರ ಇದೇ ತಿಂಗಳಿಗೆ ಹೋಲಿಸಿದರೆ ಕಲ್ಲಿದ್ದಲು ರವಾನೆಯು ಡಿಸೆಂಬರ್ 2021 ರಲ್ಲಿ 65.48 MT ನಿಂದ 75.05 MT ಗೆ 14.62 ರಷ್ಟು ಹೆಚ್ಚಾಗಿದೆ.
ಈ ಅವಧಿಯಲ್ಲಿನ ಒಟ್ಟು ಉತ್ಪಾದನೆಯಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 60.67 ಮೆ.ಟನ್ ಕಲ್ಲಿದ್ದಲನ್ನು ರವಾನಿಸುವ ಮೂಲಕ ಶೇ.12.70 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಅಕ್ಟೋಬರ್ 2021 ರ ಅಂತ್ಯದಿಂದ ಕಲ್ಲಿದ್ದಲಿನ ಆಮದು ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.