ನವದೆಹಲಿ: ದೇಶದಲ್ಲಿ ಸೌರ ವಿದ್ಯುತ್ ಶಕ್ತಿಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗುತ್ತಿದೆ. ವರದಿಗಳ ಪ್ರಕಾರ 2014 ಮತ್ತು 2021ರ ನಡುವೆ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ 18 ಪಟ್ಟು ವೃದ್ಧಿಯಾಗಿದೆ. ಅಂದರೆ 2.63 ಗಿಗಾವ್ಯಾಟ್ನಿಂದ 47.66 ಗಿಗಾವ್ಯಾಟ್ಗೆ ಹೆಚ್ಚಳವಾಗಿದೆ.
ಹೀಗಾಗಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪಳೆಯುಳಿಕೆ ರಹಿತ ಮೂಲಗಳಿಂದ ಪಡೆಯುವ ವಿದ್ಯುತ್ನ ಪ್ರಮಾಣ ಶೇ.40ಕ್ಕಿಂತಲೂ ಹೆಚ್ಚಾಗಿದೆ ಎಂದು ಸರಕಾರದ ಅಧಿಕೃತ ಮಾಹಿತಿ ತಿಳಿಸಿದೆ.
ಇನ್ನೊಂದೆಡೆ 2010 ರಿಂದ 2018ರ ಅವಧಿಯಲ್ಲಿ ಸೌರ ವಿದ್ಯುತ್ ಫಲಕಗಳ ಅಳವಡಿಕೆಯ ಯೋಜನೆಯ ವೆಚ್ಚದಲ್ಲಿ ಶೇ.80ರಷ್ಟು ಇಳಿಕೆಯಾಗಲಿದೆ ಎಂದು ಐಆರ್ಎನ್ಎ ಸಮೀಕ್ಷೆ ತಿಳಿಸಿದೆ.
ಸರಕಾರ ಸೌರವಿದ್ಯುತ್ಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸೌರ ವಿದ್ಯುತ್ ಬಳಕೆಯ ಪ್ರಮಾಣ ವೃದ್ಧಿಯಾಗುತ್ತ ಸಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.