ನವದೆಹಲಿ: ಜೈನರ ಧಾರ್ಮಿಕ ಆಚರಣೆ ಸಲ್ಲೇಖನ ಅಥವಾ ಸಂತರ ಕಾನೂನು ಬಾಹಿರವಾಗಿದ್ದು, ಇದನ್ನು ರದ್ದುಪಡಿಸಬೇಕು ಎಂಬ ರಾಜಸ್ಥಾನ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ.
ಮೃತ್ಯು ಸಂಭವಿಸುವವರೆಗೂ ಕಠಿಣ ಉಪವಾಸವನ್ನು ಆಚರಿಸುವ ಪದ್ಧತಿಗೆ ಸಂತರ ಅಥವಾ ಸಲ್ಲೇಖನ ವ್ರತ ಎನ್ನಲಾಗುತ್ತದೆ.
ಜೈನ ಧರ್ಮದಲ್ಲಿ ಅನಾದಿ ಕಾಲದಿಂದಲೂ ಇದನ್ನು ಆಚರಿಸಲಾಗುತ್ತಿದೆ.ಇತ್ತೀಚಿಗೆ ಹೈಕೋರ್ಟ್ ಈ ಆಚರಣೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸ್ತಾನಕ್ಯಾಸಿ ಜೈನ್ ಸಂಘ ಸುಪ್ರೀಕೋರ್ಟ್ ಮೆಟ್ಟಿಲೇರಿತ್ತು.
ಸಲ್ಲೇಖನ ವ್ರತ ಆತ್ಮವನ್ನು ಶುದ್ಧೀಕರಿಸುವ ಆಚರಣೆ, ಇದನ್ನು ಆತ್ಮಹತ್ಯೆ ಎಂದು ಬಣ್ಣಿಸಿ ಧಾರ್ಮಿಕ ಹಕ್ಕನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಸಂಘ ಹೇಳಿದೆ. ಇದೀಗ ಇದರ ವಿಚಾರಣೆ ಕೈಗೊಂಡಿರುವ ಸುಪ್ರೀಂ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ. ಇದರಿಂದ ಸಲ್ಲೇಖನ ವ್ರತವನ್ನು ಮುಂದುವರೆಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.