ನವದೆಹಲಿ: ಭಾರತ ವಿರೋಧಿ ಸಂದೇಶಗಳನ್ನು ಬಿತ್ತರಿಸುತ್ತಿದ್ದ ಪಾಕಿಸ್ಥಾನದ ಕನಿಷ್ಠ 20 ಯುಟ್ಯೂಬ್ ಚಾನೆಲ್ಗಳು ಈಗ ಜಾಗತಿಕ ನಿಷೇಧಕ್ಕೆ ಒಳಗಾಗಿವೆ. ಭಾರತದ ಬಗ್ಗೆ ಸುಳ್ಳು ನಿರೂಪಣೆಗಳನ್ನು ಉತ್ತೇಜಿಸುತ್ತಿದ್ದ ಈ ಚಾನೆಲ್ಗಳನ್ನು ಎಲ್ಲಾ ಅಂತರರಾಷ್ಟ್ರೀಯ ಪ್ರಸಾರಗಳಿಂದ ನಿಷೇಧಿಸಲಾಗಿದೆ. ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಈ ಬೆಳವಣಿಗೆ ನಡೆದಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ನೇತೃತ್ವದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಸೋಮವಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿ, ಭಾರತದ ಬಗ್ಗೆ ಸುಳ್ಳು ಹರಡಿಸುತ್ತಿರುವ ಯುಟ್ಯೂಬ್ನಲ್ಲಿನ 20 ಸುದ್ದಿ ಚಾನೆಲ್ಗಳು / ಪೋರ್ಟಲ್ಗಳನ್ನು ಬ್ಲಾಕ್ ಮಾಡುವಂತೆ ಇಂಟರ್ನೆಟ್ ಸೇವೆ ಪೂರೈಕೆದಾರರಿಗೆ ನಿರ್ದೇಶಿಸಿತ್ತು.
ನಿಷೇಧಿತ ಪಾಕಿಸ್ಥಾನಿ ಯುಟ್ಯೂಬ್ ಚಾನೆಲ್ಗಳೆಂದರೆ – ಪಂಚ್ ಲೈನ್, ಇಂಟರ್ನ್ಯಾಷನಲ್ ವೆಬ್ ನ್ಯೂಸ್, ಖಾಲ್ಸಾ ಟಿವಿ, ದಿ ನೇಕೆಡ್ ಟ್ರುತ್, ನ್ಯೂಸ್ 24, 48 ನ್ಯೂಸ್, ಫಿಕ್ಷನಲ್, ಹಿಸ್ಟಾರಿಕಲ್ ಫ್ಯಾಕ್ಟ್ಸ್, ಪಂಜಾಬ್ ವೈರಲ್, ನಯಾ ಪಾಕಿಸ್ಥಾನ್ ಗ್ಲೋಬಲ್, ಕವರ್ ಸ್ಟೋರಿ, ಜುನಾಯ್ದ್ ಹಾಲೆಮ್ ಅಫೀಶಿಯಲ್, ತಯಾಬ್ ಹನೀಫ್, ಝೈನ್ ಅಲಿ ಅಫಿಶಿಯನ್, ಮೊಹ್ಸಿನ್ ರಜಪೂತ್ ಅಫೀಶಿಯಲ್, ಕನೆಜ್ ಫಾತಿಮಾ, ಸದಾಫ್ ದುರಾನಿ, ಮಿಯಾನ್ ಇಮ್ರಾನ್ ಅಹ್ಮದ್, ಮತ್ತು ನಜಮ್ ಉಲ್ ಹಾಸನ್ ಬಾಜ್ವಾ.
ಸಚಿವಾಲಯದ ಪ್ರಕಾರ, ಈ ಚಾನಲ್ಗಳು ಮತ್ತು ವೆಬ್ಸೈಟ್ಗಳು ಪಾಕಿಸ್ಥಾನದಿಂದ ಕಾರ್ಯನಿರ್ವಹಿಸುವ ಸಂಘಟಿತ ನೆಟ್ವರ್ಕ್ಗೆ ಸೇರಿವೆ ಮತ್ತು ಭಾರತಕ್ಕೆ ಸಂಬಂಧಿಸಿದ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿ ಹರಡುವುದನ್ನು ಕಾಯಕ ಮಾಡಿಕೊಂಡಿವೆ. ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತರು, ಜನರಲ್ ಬಿಪಿನ್ ರಾವತ್ ಇತ್ಯಾದಿ ವಿಷಯಗಳ ಬಗ್ಗೆ ಸುಳ್ಳು ಹರಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.