ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ದುಪ್ಪಟ್ಟಗಿದೆ. ಇದಕ್ಕೆ ಕಾರಣ ಅವರ ಹೊಸ ಕಾರು. ಈ ಕಾರಿನ ವಿಶೇಷತೆಗಳು ಈಗ ಚರ್ಚೆಯ ವಿಷಯವಾಗಿದೆ. ಅಮೆರಿಕದ ಮರ್ಸಿಡಿಸ್ ಬೆಂಝ್ ಕಂಪನಿ ತಯಾರಿಸಿರುವ ‘ಮೈಬ್ಯಾಕ್ ಎಸ್ 650’ (Mercedes MayBach) ಕಾರನ್ನು ಮೋದಿ ಇನ್ನು ಮುಂದೆ ಬಳಸಲಿದ್ದಾರೆ.
ಯಾವುದೇ ಅಪಾಯ ಎದುರಾದರು ಮೋದಿ ಕಿಂಚಿತ್ತೂ ಏನೂ ಆಗದಂತೆ ತಡೆಯಬಲ್ಲ ಶಕ್ತಿ ಈ ಕಾರಿಗೆ ಇದೆ. ಇದು ಸ್ಪೋಟಕ್ಕೆ , ಗುಂಡೇಟಿಗೆ ಜಗ್ಗಲಾರದು. ಎಕೆ 47 ಗನ್ನಿಂದ ನಡೆಸುವ ದಾಳಿ ತಡೆಯುವ, ಕಾರಿನ 2 ಮೀಟರ್ ವ್ಯಾಪ್ತಿಯಲ್ಲಿ 15 ಕೆಜಿ ಟಿಎನ್ಟಿ ಸ್ಫೋಟವಾದರೂ ರಕ್ಷಣೆ ನೀಡುವ, ವಿಷಾನಿಲ ದಾಳಿ ವೇಳೆ ಒಳಗಿದ್ದವರಿಗೆ ಗಾಳಿಯ ಪೂರೈಕೆಗಾಗಿ ಪ್ರತ್ಯೇಕ ವ್ಯವಸ್ಥೆ, ಇಂಧನ ಟ್ಯಾಂಕ್ ಪಂಚರ್ ಆದರೆ ಸ್ವಯಂ ಸರಿಪಡಿಸುವ ವಿಶೇಷ ವ್ಯವಸ್ಥೆ, ಏನೇ ಹಾನಿಯಾದರೂ ತ್ವರಿತವಾಗಿ ಸ್ಥಳದಿಂದ ತೆರಳಲು ಅವಕಾಶ ಕಲ್ಪಿಸುವ ಟೈಯರ್ ಮೊದಲಾದ ವಿಶೇಷತೆಗಳನ್ನು ಕಾರು ಒಳಗೊಂಡಿದೆ.
ಈ ಕಾರಿನ ಇಂಧನ ಟ್ಯಾಂಕ್ಗೆ ವಿಶೇಷ ಕವಚ ಇದೆ. ಸ್ಪೋಟ, ಅಪಘಾತದಲ್ಲಿ ಇಂಧನ ಟ್ಯಾಂಕ್ ರಂಧ್ರ ಬಿದ್ದರೂ ಸ್ವಯಂ ಆಗಿ ಮುಚ್ಚಿಕೊಳ್ಳುವ ವ್ಯವಸ್ಥೆ ಇದರಲ್ಲಿದೆ.
ಇದುವರೆಗೆ ಮೋದಿ ರೇಂಜ್ ರೋವರ್ ವಾಗ್, ಟೊಯೋಟಾ ಲ್ಯಾಂಡ್ ಕ್ರೂಸರ್ ಮೊದಲಾದ ಕಾರುಗಳನ್ನು ಬಳಸುತ್ತಿದ್ದರು. ಇದೀಗ ಅವರ ಬತ್ತಳಿಕೆಗೆ ಹೊಸ ಕಾರು ಸೇರ್ಪಡೆಯಾಗಿದೆ.
ಈ ಕಾರಿನ ಮಾರುಕಟ್ಟೆ ಬೆಲೆ 12 ಕೋಟಿ ರೂ ಎಂದು ಹೇಳಲಾಗಿದೆ. ಇ ಕಾರನ್ನು ಮರ್ಸಿಡಿಸ್ ಕಂಪನಿ ಬೇಡಿಕೆಗೆ ತಕ್ಕಂತೆ ವಿಶೇಷವಾಗಿ ರೂಪಿಸಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.