ದುಂಡಿಗಲ್: ಫ್ರಾನ್ಸ್ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದ 36 ರಫೇಲ್ ವಿಮಾನಗಳ ಪೈಕಿ 32 ವಿಮಾನಗಳನ್ನು ಈಗಾಗಲೇ ಭಾರತಕ್ಕೆ ವಿತರಿಸಲಾಗಿದೆ, ಉಳಿದ ನಾಲ್ಕರಲ್ಲಿ ಮೂರು ನಿಗದಿತ ಸಮಯಕ್ಕೆ ಸರಿಯಾಗಿ ಅಂದರೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಭಾರತಕ್ಕೆ ಬರಲಿವೆ ಎಂದು ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದಾರೆ.
“ರಫೇಲ್ ಯುದ್ಧವಿಮಾನಗಳ ಸಮಯೋಚಿತ ವಿತರಣೆಗಾಗಿ ನಾವು ಫ್ರಾನ್ಸಿಗೆ ಕೃತಜ್ಞರಾಗಿರುತ್ತೇವೆ. 36 ವಿಮಾನಗಳಿಗೆ ಒಪ್ಪಂದವಾಗಿತ್ತು, ಅವುಗಳಲ್ಲಿ 32 ಅನ್ನು ವಿತರಿಸಲಾಗಿದೆ. ಉಳಿದ ನಾಲ್ಕರಲ್ಲಿ 3 ಸಮಯಕ್ಕೆ ಸರಿಯಾಗಿ ಫೆಬ್ರವರಿಯಲ್ಲಿ ತಲುಪುತ್ತವೆ” ಎಂದಿದ್ದಾರೆ.
ದುಂಡಿಗಲ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಸಂಯೋಜಿತ ಪದವಿ ಪರೇಡ್ ಅನ್ನು ಪರಿಶೀಲಿಸಿದ ನಂತರ ದುಂಡಿಗಲ್ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು.
“ಭಾರತದ ನಿರ್ದಿಷ್ಟ ಸುಧಾರಣೆಗಳನ್ನು ಹೊಂದಿರುವ ಕೊನೆಯ ರಫೇಲ್ ವಿಮಾನವನ್ನು ಅದರ ಎಲ್ಲಾ ಪ್ರಯೋಗಗಳನ್ನು ನಡೆಸಿದ ನಂತರ ವಿತರಿಸಲಾಗುವುದು. ನಾವು ರಕ್ಷಣಾ ಸಚಿವರೊಂದಿಗೆ ಚರ್ಚಿಸಿದ್ದೇವೆ, ರಫೇಲ್ ಭವಿಷ್ಯದ ನಿರ್ವಹಣೆ ಮತ್ತು ಭಾರತದಲ್ಲಿ ಡಿ-ಲೆವೆಲ್ ನಿರ್ವಹಣೆಯ ಸ್ಥಾಪನೆಯನ್ನು ನಾವು ಚರ್ಚಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಫ್ರಾನ್ಸ್ ನಡುವಿನ ನಿಕಟ ಕಾರ್ಯತಂತ್ರದ ಸಂಬಂಧಗಳನ್ನು ಉಲ್ಲೇಖಿಸಿ ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಅವರು ಭಾರತ ಬಯಸಿದರೆ ಹೆಚ್ಚಿನ ರಫೇಲ್ ಯುದ್ಧ ವಿಮಾನಗಳನ್ನು ಒದಗಿಸಲು ತಮ್ಮ ದೇಶವು ಸಿದ್ಧವಾಗಿದೆ ಎಂದು ಹೇಳಿದ ಒಂದು ದಿನದ ನಂತರ ರಫೇಲ್ ಕುರಿತು ಚೌಧರಿ ಅವರು ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.