
ನವದೆಹಲಿ: 20 ವರ್ಷಗಳ ಹಿಂದೆ ಈ ದಿನ ಭಾರತದ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರ ಸಂಸತ್ತಿನ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದು ದೇಶದ ಆತ್ಮಸಾಕ್ಷಿಯನ್ನು ನಡುಗಿಸುವ ಪ್ರಯತ್ನವನ್ನು ನಡೆಸಲಾಯಿತು.
ಡಿಸೆಂಬರ್ 13, 2001 ರಂದು ನಡೆದ ಈ ಭಯಾನಕ ಘಟನೆ ದೇಶದ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ.
ಪಾಕಿಸ್ಥಾನ ಮೂಲದ ಉಗ್ರಗಾಮಿ ಗುಂಪುಗಳಾದ ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಐವರು ಭಯೋತ್ಪಾದಕರು ಗೃಹ ಸಚಿವಾಲಯ ಮತ್ತು ಸಂಸತ್ತಿನ ನಕಲಿ ಸ್ಟಿಕ್ಕರ್ಗಳನ್ನು ಹೊಂದಿದ ಬಿಳಿ ಅಂಬಾಸಿಡರ್ ಮೂಲಕ ಸಂಸತ್ತಿನ ಆವರಣಕ್ಕೆ ನುಸುಳಿ ದುಷ್ಕೃತ್ಯವನ್ನು ಎಸಗಿದ್ದರು.
ಎಕೆ 47 ರೈಫಲ್ಗಳು, ಗ್ರೆನೇಡ್ ಲಾಂಚರ್ಗಳು, ಪಿಸ್ತೂಲ್ಗಳು ಮತ್ತು ಗ್ರೆನೇಡ್ಗಳನ್ನು ಹೊತ್ತ ಭಯೋತ್ಪಾದಕರು ಸಂಸತ್ತಿನ ಸಂಕೀರ್ಣದ ಸುತ್ತಲೂ ನಿಯೋಜಿಸಲಾಗಿದ್ದ ಭದ್ರತಾ ಕವಚಗಳನ್ನು ಭೇದಿಸಿ ಕಾರನ್ನು ಒಳಗೆ ನುಗ್ಗಿಸಿದ್ದರು, ಈ ವೇಳೆ ತಡೆಯಲೆತ್ನಿಸಿದ ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದಾರೆ.
“2001 ರಲ್ಲಿ ಸಂಸತ್ತಿನ ದಾಳಿಯ ಸಂದರ್ಭದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲಾ ಭದ್ರತಾ ಸಿಬ್ಬಂದಿಗೆ ನಾನು ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ. ಅವರ ಸೇವೆ ಮತ್ತು ಪರಮ ತ್ಯಾಗ ದೇಶ ಪ್ರತಿ ನಾಗರಿಕರಿಗೆ ಸ್ಫೂರ್ತಿ ನೀಡುತ್ತಲೇ ಇದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


