ನವದೆಹಲಿ: ಸೌದಿ ಸರ್ಕಾರವು ಸುನ್ನಿ ಇಸ್ಲಾಮಿಕ್ ಸಂಘಟನೆಯಾದ ತಬ್ಲಿಘಿ ಜಮಾತ್ ಅನ್ನು “ಭಯೋತ್ಪಾದನೆಯ ಹೆಬ್ಬಾಗಿಲು” ಎಂದು ಕರೆದಿದ್ದು, ಅದಕ್ಕೆ ನಿಷೇಧ ಹೇರಿದೆ.
ತಬ್ಲೀಘಿ ಜಮಾತ್ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡಲು ಮುಂದಿನ ಶುಕ್ರವಾರದ ಬೋಧನೆಯನ್ನು ಮೀಸಲಿಡುವಂತೆ ಮಸೀದಿಯಲ್ಲಿರುವ ಬೋಧಕರಿಗೆ ಸೂಚಿಸಲಾಗಿದೆ ಎಂದು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್ನಲ್ಲಿ ತಿಳಿಸಿದೆ.
“ತಬ್ಲೀಘಿ ಜಮಾತ್ ತಪ್ಪು ಮಾರ್ಗದರ್ಶನ ಮತ್ತು ಅಪಾಯಕಾರಿ ಬೋಧನೆಗಳನ್ನು ಹೊಂದಿದ್ದು, ಇದು ಭಯೋತ್ಪಾದನೆಗೆ ದಾರಿ ಮಾಡುತ್ತಿದೆ. ತಬ್ಲೀಘಿಗಳು ಏನೇ ಹೇಳಿಕೊಂಡರೂ ಅವರ ಕೃತ್ಯಗಳು ತಪ್ಪು ಮಾರ್ಗದಲ್ಲಿದೆ”ಎಂದು ಅದು ಹೇಳಿದೆ.
“ಸಮಾಜಕ್ಕೆ ತಬ್ಲಿಘಿ ಮತ್ತು ದಾವಾ ಗುಂಪುಗಳ ಅಪಾಯವನ್ನು ಪರಿಗಣಿಸಿ ಸೌದಿ ಅರೇಬಿಯಾದಲ್ಲಿ ಅದನ್ನು ನಿಷೇಧಿಸಲಾಗಿದೆ” ಎಂದು ಸಚಿವಾಲಯವು ಸೇರಿಸಿದೆ.
1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಚಳುವಳಿಯಾಗಿದ್ದು, ಮುಸ್ಲಿಮರಿಗೆ ಸುನ್ನಿ ಇಸ್ಲಾಂನ ಶುದ್ಧ ರೂಪಕ್ಕೆ ಮರಳಲು ಮತ್ತು ಧಾರ್ಮಿಕವಾಗಿ ಅನುಸರಿಸುವಂತೆ ಪ್ರೇರೇಪಿಸುತ್ತದೆ. ವಿಶೇಷವಾಗಿ ಉಡುಪು, ವೈಯಕ್ತಿಕ ನಡವಳಿಕೆ ಮತ್ತು ಆಚರಣೆಗಳಿಗೆ ಸಂಬಂಧಿಸಿದಂತೆ ಸುನ್ನಿ ಇಸ್ಲಾಂ ಅನ್ನು ಅನುರಿಸುವಂತೆ ಮಾಡುವುದು ಇದರ ಉದ್ದೇಶ.
ಇದು ಜಗತ್ತಿನಾದ್ಯಂತ 350 ರಿಂದ 400 ಮಿಲಿಯನ್ ಸದಸ್ಯರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
His Excellency the Minister of Islamic Affairs, Dr.#Abdullatif Al_Alsheikh directed the mosques' preachers and the mosques that held Friday prayer temporary to allocate the next Friday sermon 5/6/1443 H to warn against (the Tablighi and Da’wah group) which is called (Al Ahbab)
— Ministry of Islamic Affairs 🇸🇦 (@Saudi_MoiaEN) December 6, 2021
His Excellency also directed that the sermon include the following topics:
1- Declaration of the misguidance, deviation and danger of this group, and that it is one of the gates of terrorism, even if they claim otherwise.
2- Mention their most prominent mistakes.— Ministry of Islamic Affairs 🇸🇦 (@Saudi_MoiaEN) December 6, 2021
3- Mention their danger to society.
4- Statement that affiliation with partisan groups, including (the Tablighi and Da’wah Group) is prohibited in the Kingdom of Saudi Arabia.— Ministry of Islamic Affairs 🇸🇦 (@Saudi_MoiaEN) December 6, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.