ನ್ಯೂಯಾರ್ಕ್: ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ ವಿಂಟರ್ ಒಲಿಂಪಿಕ್ಸ್ 2022ಗೆ ರಾಜತಾಂತ್ರಿಕ ಬಹಿಷ್ಕಾರವನ್ನು ಯುಎಸ್ ಘೋಷಿಸಿದೆ. ಕೆಲ ದಿನಗಳ ಹಿಂದಷ್ಟೇ ಇದನ್ನು ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದರು.
ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಕಳವಳವಿರುವ ಕಾರಣ ಯಾವುದೇ ಅಧಿಕೃತ ನಿಯೋಗವನ್ನು ವಿಂಟರ್ ಒಲಿಂಪಿಕ್ಸ್ ಗೆ ಕಳುಹಿಸುವುದಿಲ್ಲ ಎಂದು ವೈಟ್ ಹೌಸ್ ಹೇಳಿದೆ. ಆದರೆ ಯುಎಸ್ ಅಥ್ಲೀಟ್ಗಳು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು ಮತ್ತು ಸರ್ಕಾರದ ಸಂಪೂರ್ಣ ಬೆಂಬಲವನ್ನು ಅವರು ಹೊಂದಿರುತ್ತದೆ ಎಂದು ಅದು ಹೇಳಿದೆ.
ಶ್ವೇತಭವನವು ಸಾಮಾನ್ಯವಾಗಿ ಒಲಿಂಪಿಕ್ಸ್ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಿಗೆ ನಿಯೋಗವನ್ನು ಕಳುಹಿಸುತ್ತದೆ, ಆದರೆ ಈ ಬಾರಿ ರಾಜತಾಂತ್ರಿಕ ಬಹಿಷ್ಕಾರದ ಅಡಿಯಲ್ಲಿ ಅದು ನಿಯೋಗವನ್ನು ಕಳುಹಿಸುವುದಿಲ್ಲ ಎನ್ನಲಾಗಿದೆ.
ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ವಿಂಟರ್ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಬೇಕು ಎಂಬ ಕೂಗು ದೃಢವಾಗಿ ಕೇಳಿ ಬರುತ್ತಿದೆ.
ಯುಕೆ ಸರ್ಕಾರ ಕೂಡ ಬೀಜಿಂಗ್ನಲ್ಲಿನ ಚಳಿಗಾಲದ ಒಲಿಂಪಿಕ್ಸ್ಗೆ ಅಧಿಕಾರಿಗಳನ್ನು ಕಳುಹಿಸುವುದನ್ನು ತಡೆಯುವ ಸಾಧ್ಯತೆಯನ್ನು ಸಕ್ರಿಯವಾಗಿ ಚರ್ಚಿಸುತ್ತಿದೆ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಈ ನಿರ್ಧಾರವನ್ನು ಬೆಂಬಲಿಸುತ್ತಾರೆ ಎಂದು ನಂಬಲಾಗಿದೆ.
ಈಗಾಗಲೇ ವಿಶ್ವದ ನಾನಾ ಭಾಗಗಳಲ್ಲಿ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.