ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಡಿಸೆಂಬರ್ 7 ರಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಸಶಸ್ತ್ರ ಪಡೆಗಳ ಸಾಹಸವನ್ನು ಸ್ಮರಿಸಿದ್ದಾರೆ ಮತ್ತು ಸೈನಿಕರ ಕಲ್ಯಾಣಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.
“ಸಶಸ್ತ್ರ ಪಡೆಗಳ ಧ್ವಜ ದಿನದಂದು, ನಮ್ಮ ಸಶಸ್ತ್ರ ಪಡೆಗಳ ಅನುಕರಣೀಯ ಕೊಡುಗೆಗಳನ್ನು ಮತ್ತೊಮ್ಮೆ ಸ್ಮರಿಸಲು ನಾನು ಬಯಸುತ್ತೇನೆ. ಅವರ ಪರಿಶ್ರಮ ಮತ್ತು ಧೈರ್ಯ ಅಮೋಘ. ನಮ್ಮ ಪಡೆಗಳ ಕಲ್ಯಾಣಕ್ಕೆ ಕೊಡುಗೆ ನೀಡುವಂತೆ ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ” ಎಂದಿದ್ದಾರೆ.
ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ 1949 ರಿಂದ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಎಲ್ಲಾ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಅವರಿಗಾಗಿ ಕೊಡುಗೆ ನೀಡುವ ಅವಕಾಶವನ್ನು ಈ ದಿನ ನಾಗರಿಕರಿಗೆ ನೀಡುತ್ತದೆ.
ದೇಶವನ್ನು ಕಾಯುವ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಸೇಣಿಗೆ ಸಂಗ್ರಹಿಸುವ ಸಲುವಾಗಿ ಪುಟ್ಟ ಧ್ವಜವನ್ನು ಸಾರ್ವಜನಿಕರಿಗೆ ನೀಡಿ, ಅವರಿಂದ ಕೈಲಾದಷ್ಟು ದೇಣಿಗೆ ಪಡೆದು, ಅದನ್ನು ಸೇನೆಗೆ ಅರ್ಪಿಸುವ ಕಾರ್ಯವನ್ನು ಈ ದಿನ ಮಾಡಲಾಗುತ್ತದೆ.
ಈ ದೇಣಿಗೆಯಿಂದ ಸಂಗ್ರಹವಾದ ಹಣವನ್ನು ಸೈನಿಕರು ಮತ್ತು ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ, ಯುದ್ಧದ ಸಮಯದ ಅಗತ್ಯಕ್ಕೆ, ಮಾಜಿ ಸೈನಿಕರು ಮತ್ತವರ ಕುಟುಂಬದ ಕಲ್ಯಾಣಕ್ಕೆ ಬಳಸಲಾಗುತ್ತದೆ.
On Armed Forces Flag Day, I would like to acknowledge once again the exemplary contributions of our armed forces. Their perseverance and courage are outstanding. I would also urge you all to contribute towards our forces’ welfare. pic.twitter.com/Vwn4aZyjVt
— Narendra Modi (@narendramodi) December 7, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.