ಆಗ್ರಾ: 5 ಮಕ್ಕಳನ್ನು ಹೊಂದುವ ಹಿಂದೂ ಕುಟುಂಬಕ್ಕೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶಿವಸೇನೆಯ ಆಗ್ರಾ ಘಟಕ ಘೋಷಿಸಿದೆ. ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿರುವ ಹಿನ್ನಲೆಯಲ್ಲಿ ಅದು ಈ ಘೋಷಣೆ ಮಾಡಿದೆ.
2010 ಮತ್ತು 2015ರ ನಡುವೆ ಐದು ಮಕ್ಕಳನ್ನು ಹೊಂದಿದ ಕುಟುಂಬಗಳಿಗೂ ಈ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮುನ್ಸಿಪಲ್ ಕಾರ್ಪೋರೇಶನ್ನಿಂದ ಪಡೆದ ಮಕ್ಕಳ ಜನನಪ್ರಮಾಣ ಪತ್ರವನ್ನು ಪೋಷಕರು ಒದಗಿಸಬೇಕು ಎಂದು ಶಿವಸೇನೆಯ ಜಿಲ್ಲಾ ಮುಖಂಡ ವಿನು ಲವಾನಿಯ ತಿಳಿಸಿದ್ದಾರೆ.
ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇವರು, ಒಬ್ಬ ಪತಿ ಐವರು ಪತ್ನಿಯರನ್ನು ಹೊಂದುವುದನ್ನು ಕೊನೆಗೊಳಿಸಲು ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಸೇನೆಯ ಈ ನಿರ್ಧಾರಕ್ಕೆ ಹಲವರಿಂದ ವಿರೋಧಗಳೂ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.