
ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ಗಾಗಿ ಭಾರತದ ಡ್ರಗ್ ರೆಗ್ಯುಲೇಟರ್ನ ಅನುಮೋದನೆಯನ್ನು ಕೋರಿದೆ ಎಂದು ಗುರುವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಪ್ರಕಾರ, ಹೊಸ ಕರೋನವೈರಸ್ ರೂಪಾಂತರವಾದ ‘ಓಮಿಕ್ರಾನ್’ ಕಾರಣದಿಂದಾಗಿ ಈ ಬೇಡಿಕೆಯನ್ನು ಮುಂದಿಡಲಾಗಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಕೋವಿಡ್-19 ಬೂಸ್ಟರ್ ಡೋಸ್ಗೆ ಅನುಮೋದನೆ ಕೋರಿ ಮನವಿ ಸಲ್ಲಿಸಿದ ಮೊದಲ ಭಾರತೀಯ ಕಂಪನಿಯಾಗಿದೆ.
ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಮತ್ತು ಕೋವಿಡ್-19 ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಬೂಸ್ಟರ್ ಡೋಸ್ ಕುರಿತು ವೈಜ್ಞಾನಿಕ ಪುರಾವೆಗಳನ್ನು ಪರಿಗಣಿಸುತ್ತಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.
ರಾಜಸ್ಥಾನ, ಛತ್ತೀಸ್ಗಢ, ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳು ಸಹ ಕೇಂದ್ರ ಸರ್ಕಾರದ ಬಳಿ ಬೂಸ್ಟರ್ ಡೋಸ್ಗಾಗಿ ಬೇಡಿಕೆ ಇಟ್ಟಿವೆ, ಓಮಿಕ್ರಾನ್ ಕಳವಳ ಇದಕ್ಕೆ ಕಾರಣವಾಗಿದೆ.
ಇತ್ತೀಚೆಗೆ, ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ SII ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನಾವಲ್ಲ, “ಆಕ್ಸ್ಫರ್ಡ್ನ ವಿಜ್ಞಾನಿಗಳು ಹೊಸ ರೂಪಾಂತರದ ವಿರುದ್ಧ ಆರು ತಿಂಗಳಲ್ಲಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುವ ಹೊಸ ಲಸಿಕೆಯನ್ನು ಹೊರತರಬಹುದು ಎಂದು ಹೇಳಿದ್ದಾರೆ” ಎಂದಿದ್ದಾರೆ.
ಹೊಸ ಓಮಿಕ್ರಾನ್ ರೂಪಾಂತರ ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿ ಆಗಿದೆ. WHO ಪ್ರಕಾರ, ಇದರ ಸ್ಪೈಕ್ ಪ್ರೋಟೀನ್ನಲ್ಲಿನ ಹೆಚ್ಚಿನ ಸಂಖ್ಯೆಯ ರೂಪಾಂತರಗಳು ಹಿಂದಿನ ಎಲ್ಲಾ ತಳಿಗಳಿಗಿಂತ ಇದನ್ನು ಹೆಚ್ಚು ಹರಡುವಂತೆ ಮಾಡಬಲ್ಲದು. ದಕ್ಷಿಣ ಆಫ್ರಿಕಾದ ವೈದ್ಯಕೀಯ ಅಧಿಕಾರಿಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಈ ರೂಪಾಂತರವು ಕಂಡುಬಂದಿದೆ ಮತ್ತು ಪ್ರಕರಣಗಳು ಸೌಮ್ಯವಾಗಿರುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


