
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಭಾರತ ಮಹತ್ವದ ಪ್ರಗತಿ ಸಾಧಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ಭಾರತ 19 ಸ್ಥಾನಗಳ ಜಿಗಿತವನ್ನು ಕಂಡು 26 ನೇ ಸ್ಥಾನವನ್ನು ತಲುಪಿದೆ ಎಂದು ಬ್ಲೂಮ್ಬರ್ಗ್ನ ಕೋವಿಡ್ ರೆಸಿಲಿಯನ್ಸ್ ರ್ಯಾಂಕಿಂಗ್ ನಿಂದ ತಿಳಿದು ಬಂದಿದೆ.
ಸಾಂಕ್ರಾಮಿಕ ರೋಗ ಕೊರೋನಾವೈರಸ್ ಅನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ ಭಾರತದ ಕಾರ್ಯವನ್ನು ಇಡೀ ವಿಶ್ವವೇ ಕೊಂಡಾಡಿದೆ. ಬ್ಲೂಮ್ ಬರ್ಗ್ ವರದಿ ಪ್ರಕಾರ ಭಾರತ ಕೊರೋನಾ ನಿರ್ವಹಣೆಯಲ್ಲಿ 19 ಸ್ಥಾನಗಳ ಜಿಗಿತ ಕಂಡಿದೆ.
ಈ ವರ್ಷದ ಮೇ ತಿಂಗಳಲ್ಲಿ ನಾಲ್ಕು ಲಕ್ಷಕ್ಕಿಂತ ಅಧಿಕ ಕೊರೋನಾ ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿದ್ದವು. ಆದರೆ ಪ್ರಸ್ತುತ 7 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ.
ಒಂದು ಸಂದರ್ಭದಲ್ಲಿ ಕೋವಿಡ್-19 ನಿಭಾಯಿಸುವ ಕಾರ್ಯದಲ್ಲಿ ಭಾರತ 45ನೇ ಸ್ಥಾನದಲ್ಲಿತ್ತು. ಇದೀಗ 19 ಸ್ಥಾನ ಜಿಗಿತ ಕಂಡು 26ನೇ ಸ್ಥಾನದಲ್ಲಿದೆ.
ಕೊರೋನಾ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸುವಲ್ಲಿ ಅತ್ಯುತ್ತಮ ಮತ್ತು ಅತಿ ಕೆಟ್ಟ ನಿರ್ವಹಣೆಯ ಬಗ್ಗೆ ಶ್ರೇಯಾಂಕವನ್ನು ಬ್ಲೂಮ್ಬರಗ್ನ ಕೋವಿಡ್ ರೆಸಿಲಿಯನ್ಸ್ ರ್ಯಾಂಕಿಂಗ್ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


