ನವದೆಹಲಿ: ಶ್ರೀನಗರದಲ್ಲಿ ಬುಧವಾರ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಹತ್ಯೆಯಾದ ಮೂವರು ಉಗ್ರರನ್ನು ಮೆಹ್ರಾನ್ ಯಾಸೀನ್ ಶಲ್ಲಾ, ಅರಾಫತ್ ಅಹ್ಮದ್ ಶೇಖ್ ಮತ್ತು ಮಂಜೂರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ.
ಮೆಹ್ರಾನ್ ಯಾಸೀನ್ ಶಲ್ಲಾ ಕಣಿವೆಯಲ್ಲಿ ಪಾಕಿಸ್ಥಾನಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ನ ಅಂಗಸಂಸ್ಥೆಯಾದ ಟಿಆರ್ಎಫ್ನ ಕಮಾಂಡರ್ ಆಗಿದ್ದ ಎಂದು ಮೂಲಗಳು ತಿಳಿಸಿವೆ.
ಸಿಖ್ ಪ್ರಾಂಶುಪಾಲರಾದ ಸುಪಿಂದರ್ ಕೌರ್ ಮತ್ತು ಹಿಂದೂ ಶಿಕ್ಷಕ ದೀಪಕ್ ಚಂದ್ ಅವರ ಹತ್ಯೆಯಲ್ಲಿ ಶಲ್ಲಾ ಭಾಗಿಯಾಗಿದ್ದ ಎಂದು ಹೇಳಲಾಗಿದೆ.
ಅಕ್ಟೋಬರ್ 7 ರಂದು ಇಬ್ಬರು ಶಾಲಾ ಶಿಕ್ಷಕರ ಮೇಲೆ ಗುಂಡು ಹಾರಿಸಲಾಯಿತು. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಈ ವರ್ಷ ಜೂನ್ 26 ರಂದು ಶ್ರೀನಗರದಲ್ಲಿ ಗ್ರೆನೇಡ್ ದಾಳಿಯಲ್ಲಿ ಈ ಉಗ್ರರು ಭಾಗಿಯಾಗಿದ್ದರು, ಈ ದಾಳಿಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದರು ಮತ್ತು ಮೂವರು ಗಾಯಗೊಂಡಿದ್ದರು.
ಆರೋಪಿಯ ವೈದ್ಯಕೀಯ ತಪಾಸಣೆಯ ನಂತರ ಶ್ರೀನಗರದ ಖನ್ಯಾರ್ ಠಾಣೆಗೆ ಹಿಂತಿರುಗುತ್ತಿದ್ದ ಪಿಎಸ್ಐ ಅರ್ಷದ್ ಅಹ್ಮದ್ ಮಿರ್ನನ್ನು ಮೆಹ್ರಾನ್ ಯಾಸೀನ್ ತನ್ನ ಇತರ ಸಹಚರರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.