ನವದೆಹಲಿ: ನೀರಿನ ಟ್ಯಾಂಕ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಸರ್ಕಾರದ ಕಾನೂನು ಸಚಿವ ಕಪಿಲ್ ಶರ್ಮಾ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ನೀರಿನ ಟ್ಯಾಂಕ್ ಖರೀದಿಸುವಲ್ಲಿ ಸುಮಾರು 400ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ಶೀಲಾ ಅವರ ಕೈವಾಡವಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಇದರ ಸತ್ಯಾಸತ್ಯತೆ ಪತ್ತೆ ಮಾಡಲು ಕಾನೂನು ಸಚಿವರು ’ಫ್ಯಾಕ್ಟ್ ಫೈಂಡಿಂಗ್ ಕಮಿಟಿ’ಯನ್ನು ರಚಿಸಿದ್ದರು. ಈ ಕಮಿಟಿ ಇದೀಗ ವರದಿಯನ್ನು ಸಲ್ಲಿಸಿದ್ದು, ಅವ್ಯವಹಾರ ಸಾಬೀತಾಗಿದೆ.
ಇದೀಗ ಈ ಕಮಿಟಿಯ ವರದಿಯ ಆಧಾರದ ಮೇರೆಗೆ ಶೀಲಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಸಚಿವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
2012ರಲ್ಲಿ ಶೀಲಾ ಅಧಿಕಾರವಧಿಯಲ್ಲಿ 384ಸ್ಟೈನ್ಲೆಸ್ ಸ್ಟೀಲ್ ನೀರಿನ ಟ್ಯಾಂಕರುಗಳನ್ನು ಖರೀದಿಸಲಾಗಿತ್ತು, ಇದರಲ್ಲಿ 400 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ.
2
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.