ನವದೆಹಲಿ: ಇಸ್ರೇಲ್ನ ನೂತನ ಪ್ರಧಾನಿ ನಫ್ತಾಲಿ ಬೆನೆಟ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದು, ಎರಡೂ ದೇಶಗಳು ಶೀಘ್ರದಲ್ಲೇ ದಿನಾಂಕ ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ತಿಳಿಸಿದ್ದಾರೆ.
“ಇಸ್ರೇಲ್ ಪ್ರಧಾನಿಯ ಭಾರತ ಭೇಟಿಗೆ ದಿನಾಂಕ ನಿಗದಿಪಡಿಸುವ ಹಂತದಲ್ಲಿದ್ದೇವೆ. ಇನ್ನೂ ದಿನಾಂಕ ಅಂತಿಮಗೊಂಡಲ್ಲ, ಮುಂದಿನ ವರ್ಷದ ಮಧ್ಯದಲ್ಲಿ ಅವರು ಭಾರತಕ್ಕೆ ಭೇಟಿ ನೀಡುವುದು ಖಚಿತ” ಎಂದು ಭಾರತದ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಹೇಳಿದ್ದಾರೆ.
ಗ್ಲಾಸ್ಗೋದಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ಸಂದರ್ಭದಲ್ಲಿ ಮೋದಿ ಮತ್ತು ನಫ್ತಾಲಿ ತಮ್ಮ ಮೊದಲ ಸಭೆಯನ್ನು ನಡೆಸಿದರು. ರಕ್ಷಣೆ, ಪರಿಸರ ಮತ್ತು ಜಾಗತಿಕ, ಪ್ರಾದೇಶಿಕ ವಿಷಯಗಳ ಕುರಿತು ವಿವಿಧ ವಿಷಯಗಳ ಚರ್ಚೆಗಳನ್ನು ನಡೆಸಿದರು. ಇಸ್ರೇಲ್ನಲ್ಲಿ ಪ್ರಧಾನಿ ಮೋದಿಯ ಜನಪ್ರಿಯತೆಯನ್ನು ಪರಿಗಣಿಸಿ ತಮ್ಮ ಪಕ್ಷಕ್ಕೆ ಸೇರುವಂತೆ ನಫ್ತಾಲಿ ಅವರು ಪ್ರಧಾನಿ ಮೋದಿಯವರನ್ನು ಹಾಸ್ಯದ ಧಾಟಿಯಲ್ಲಿ ಕೇಳಿಕೊಂಡರು.
ಎರಡೂ ದೇಶಗಳು ಶೀಘ್ರದಲ್ಲೇ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪೂರ್ಣಗೊಳಿಸಲಿವೆ ಎಂದು ಗಿಲೋನ್ ಹೇಳಿದ್ದಾರೆ.
“ಭಾರತ ಮತ್ತು ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸಿವೆ ಮತ್ತು ಜೂನ್ನೊಳಗೆ ಅದನ್ನು ಅಂತಿಮಗೊಳಿಸಲು ನಿರ್ಧರಿಸಿದ್ದೇವೆ. ಇದು ದೇಶಗಳ ನಡುವಿನ ವ್ಯಾಪಾರ, ಪರಿಣಿತ ಕಾರ್ಮಿಕರ ವಿನಿಮಯ ಮತ್ತು ಇತರ ವಿಷಯಗಳಿಗೆ ಸಹಾಯ ಮಾಡುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.