ನವದೆಹಲಿ: ಭಾರತದ ಹೆಮ್ಮೆಯ ಇಸ್ರೋದ ಮುನ್ನೆಚ್ಚರಿಕೆ ಕ್ರಮದಿಂದಾಗಿ ಚಂದ್ರನ ಸುತ್ತ ಸುತ್ತುತ್ತಿರುವ ಬಾಹ್ಯಾಕಾಶ ನೌಕೆಗಳ ನಡುವೆ ಸಂಭವಿಸಬಹುದಾಗಿದ್ದ ಢಿಕ್ಕಿ ತಪ್ಪಿ ಹೋಗಿದೆ. ಇಸ್ರೋದ ಚಂದ್ರಯಾನ-2 ಆರ್ಬಿಟರ್ ಮತ್ತು ನಾಸಾದ ಎಲ್ ಆರ್ ಒ (Lunar Reconnaissance orbiter) ಪರಸ್ಪರ ಡಿಕ್ಕಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಇಸ್ರೋದ ಚಂದ್ರಯಾನ- 2 ಆರ್ಬಿಟರ್ ಮತ್ತು ನಾಸಾದ ಆರ್ಬಿಟರ್ಗಳು ಕಕ್ಷೆ ಸೇರುವ ಸ್ಥಳದಲ್ಲಿ ಕಳೆದ ತಿಂಗಳು ಪರಸ್ಪರ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಎನ್ನಲಾಗಿದೆ. ಆದರೆ ಈ ವಿಷಯವನ್ನು ಮೊದಲೇ ಪತ್ತೆ ಮಾಡಿದ ಇಸ್ರೋ, ಚಂದ್ರಯಾನ ಆರ್ಬಿಟರ್ನ ಕಕ್ಷೆಯನ್ನು ತುಸು ಬದಲಾಯಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದೆ.
ಅ. 20ರಂದು ಚಂದ್ರನ ಉತ್ತರ ಧ್ರುವದ ಬಳಿ ಈ ಎರಡು ಉಪಗ್ರಹಗಳು ಸುಮಾರು 100 ಮೀ.ಗಳಷ್ಟುಸಮೀಪಕ್ಕೆ ಬರಲಿವೆ ಎಂದು ಅಂದಾಜಿಸಲಾಗಿತ್ತು. ಒಂದು ವೇಳೆ ಎರಡು ಉಪಗ್ರಹಗಳ ನಡುವೆ ಢಿಕ್ಕಿ ಸಂಭವಿಸಿದ್ದರೆ ಎರಡೂ ದೇಶಗಳ ಮಿಶನ್ ಚಂದ್ರಯಾನ ಯೋಜನೆ ವಿಫಲವಾಗುತ್ತಿತ್ತು. ಆದರೆ ಪಥ ಬದಲಿಸಿರುವ ಕಾರಣ ಇನ್ನು ಮುಂದೆ 2 ಆರ್ಬಿಟರ್ಗಳು ಸಮೀಪಕ್ಕೆ ಬರುವ ಭೀತಿ ಇಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಈ ಬಗ್ಗೆ ಸುಮಾರು ಒಂದು ತಿಂಗಳ ನಂತರ ಇಸ್ರೋ ಮಾಹಿತಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 18 ರಂದು ಎರಡು ಬಾಹ್ಯಾಕಾಶ ನೌಕೆಗಳ ನಡುವಿನ ಡಿಕ್ಕಿ ತಪ್ಪಿಸಲು ರೇಡಿಯಲ್ ಬೇರ್ಪಡಿಕೆ ಸಾಧನನ್ನು ವಿನ್ಯಾಸಗೊಳಿಸಲಾಗಿದೆ. ಚಂದ್ರಯಾನ-2 ಅದೇ ದಿನ ರಾತ್ರಿ ಇದನ್ನು ಕಾರ್ಯಗತಗೊಳಿಸಿತು, ಅದರ ನಂತರ ಇಂಜಿನಿಯರ್ಗಳು ಆರ್ಬಿಟರ್ನ ನಂತರದ ಟ್ರ್ಯಾಕಿಂಗ್ ಅನ್ನು ನಡೆಸಿದರು, ಹೊಸ ಕಕ್ಷೆಯೊಂದಿಗೆ ಮುಂದಿನ ದಿನಗಳಲ್ಲಿ LRO ನೊಂದಿಗೆ ಯಾವುದೇ ನಿಕಟ ಸಂಪರ್ಕಗಳು ಇರುವುದಿಲ್ಲ ಎಂದು ಮರುದೃಢೀಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.