ಹೈದರಾಬಾದ್: ಹೈದರಾಬಾದ್ನ 13 ವರ್ಷದ ಬಾಲಕಿ ಮುರಿಕಿ ಪುಲಕಿತಾ ಹಸ್ವಿ ಇತ್ತೀಚೆಗೆ ಆಫ್ರಿಕಾದ ಅತೀ ಎತ್ತರದ ಪರ್ವತ ಕಿಲಿಮಂಜಾರೋ ಪರ್ವತವನ್ನು ಹತ್ತುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾಳೆ.
ಕಿಲಿಮಂಜಾರೋ ಪರ್ವತವನ್ನು ಹತ್ತಿದ ತನ್ನ ಅನುಭವವನ್ನು ಹಂಚಿಕೊಂಡ ಮುರಿಕಿ ಪುಲಕಿತಾ ಹಸ್ವಿ, “ಇದು ಒಂದು ಸಾಹಸಮಯ ಅನುಭವವಾಗಿದೆ, ಕಿಲಿಮಂಜಾರೋ ಪರ್ವತವು ಎಲ್ಲಾ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ಪರ್ವತ” ಎಂದಿದ್ದಾಳೆ.
ಈ ವರ್ಷ ಏಪ್ರಿಲ್ನಲ್ಲಿ ನಡೆದ ಎವರೆಸ್ಟ್ ಬೇಸ್ ಕ್ಯಾಂಪ್ ನಂತರ ಮೂರು ತಿಂಗಳ ಹಿಂದೆಯೇ ಕಿಲಿಮಂಜಾರೋ ಪರ್ವತಾರೋಹಣದ ಸಿದ್ಧತೆಯನ್ನುನಡೆಸಲಾಗಿತ್ತು ಎಂದಿದ್ದಾಳೆ.
“ಬೇಸ್ ಕ್ಯಾಂಪ್ ಮಾಡಿದ ನಂತರ, ನಾನು ಎಲ್ಲಾ ಏಳು ಶಿಖರಗಳನ್ನು ಪೂರ್ಣಗೊಳಿಸಬೇಕು ಎಂಬ ಮಹದಾಸೆಯನ್ನು ಹೊಂದಿದ್ದೇನೆ. ಹೀಗಾಗಿ ಕಿಲಿಮಂಜಾರೋ ತಯಾರಿ ಪ್ರಾರಂಭಿಸಿದೆ. ಬೇಸ್ ಕ್ಯಾಂಪ್ನಲ್ಲಿ ನಾನು ಕಲಿತದ್ದು ಪರ್ವತಾರೋಹಣಕ್ಕೆ ಮಾನಸಿಕವಾಗಿ ದೃಢವಾಗಿರಬೇಕೆಂದು. ಹೀಗಾಗಿ ನಾನು ಮಾನಸಿಕವಾಗಿ ನನ್ನನ್ನು ಸದೃಢಗೊಳಿಸಲು ಯೋಗ ಮತ್ತು ಧ್ಯಾನದಂತಹ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿದ್ದೆ” ಎಂದಿದ್ದಾಳೆ.
ತನ್ನ ಭವಿಷ್ಯದ ಗುರಿಗಳ ಕುರಿತು ಮಾತನಾಡಿರುವ ಹಸ್ವಿ, “ನಾನು 2024 ರ ಮೊದಲು ಎಲ್ಲಾ ಏಳು ಶಿಖರಗಳನ್ನು ಏರಲು ಬಯಸುತ್ತೇನೆ ಮತ್ತು ಅದಕ್ಕಾಗಿ, ನಾನು ಈಗಾಗಲೇ ಎಲ್ಲಾ ಯೋಜನೆಗಳನ್ನು ಮಾಡಿದ್ದೇನೆ. ಎಲ್ಲಾ ಯುವ ಪೀಳಿಗೆಗೆ ನನ್ನ ಸಂದೇಶವೆಂದರೆ ಪರ್ವತಾರೋಹಣವನ್ನು ನೀವು ಆಯ್ಕೆ ಮಾಡಿ, ಆದರೆ ಮೂಲಭೂತವಾಗಿ ಜೀವನದಲ್ಲಿ ಎದುರಾಗುವ ಪರ್ವತದಂತಹ ಸವಾಲುಗಳನ್ನು ಎದುರಿಸಲು ಕಲಿಯಿರಿ” ಎಂದಿದ್ದಾಳೆ.
Telangana: A 13-year-old girl, Muriki Pulakita Hasvi from Hyderabad recently scaled Mount Kilimanjaro, the highest mountain in Africa
“I got to know about mountaineering through a movie. My future goal is to get to the top of all 7 summits across the world,” said Hasvi Pulakita pic.twitter.com/UWWDXkDgwT
— ANI (@ANI) November 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.