ಇಸ್ಲಾಮಾಬಾದ್: ಭಾರತದ ಬಗ್ಗೆ ಭಯಭೀತಗೊಂಡಿರುವ ಪಾಕಿಸ್ಥಾನ ಶೀಘ್ರಗತಿಯಲ್ಲಿ ತನ್ನ ಅಣ್ವಸ್ತ್ರ ಶಕ್ತಿಯನ್ನು ಬಲಪಡಿಸುತ್ತಿದೆ. ಈಗಾಗಲೇ ಪಾಕ್ ಪಡೆಗಳು 120 ಯುದ್ಧ ಪರಮಾಣು ಸಿಡಿತಲೆಗಳನ್ನು ಹೊಂದಿದೆ. ಭಾರತೀಯ ಪಡೆಗಳು ಕೇವಲ 100 ಪರಮಾಣು ಸಿಡಿತಲೆಗಳನ್ನು ಹೊಂದಿದೆ.
ವರ್ಷಕ್ಕೆ 14ರಿಂದ 27 ಸಿಡಿತಲೆಗಳನ್ನು ತಯಾರಿಸುತ್ತಿರುವ ಪಾಕಿಸ್ಥಾನದ ಪರಮಾಣು ಸಿಡಿತಲೆ ಮುಂದಿನ 20 ವರ್ಷಗಳಲ್ಲಿ 350 ದಾಟಲಿದೆ. ಇನ್ನು ಹತ್ತು ವರ್ಷದಲ್ಲಿ ಅದು ಚೀನಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ನ್ನೂ ಅದು ಹಿಂದಿಕ್ಕಲಿದೆ ಎಂದು ವರದಿ ತಿಳಿಸಿದೆ.
ಭಾರತ ವರ್ಷಕ್ಕೆ ಕೇವಲ 2 ರಿಂದ ಐದು ಸಿಡಿತಲೆಗಳನ್ನು ಮಾತ್ರ ತಯಾರಿಸುತ್ತಿದೆ. ಹೀಗಾಗಿ ಮುಂದಿನ 5 ಅಥವಾ 10 ವರ್ಷದಲ್ಲಿ ಪಾಕಿಸ್ಥಾನದ ಪರಮಾಣು ಸಾಮರ್ಥ್ಯ ಭಾರತದ ಎರಡರಷ್ಟಾಗಲಿದೆ. ಅಲ್ಲದೇ ಅಮೆರಿಕ ಮತ್ತು ರಷ್ಯಾದ ಬಳಿಕದ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ.
‘ಪಾಕಿಸ್ಥಾನ ಭಾರತಕ್ಕೆ ತೀವ್ರ ಸ್ಪರ್ಧೆಯನ್ನು ಒಡ್ಡುತ್ತಿದೆ ಮತ್ತು ಭಾರತವನ್ನು ಹಿಂದಿಕ್ಕಿ ಮುಂದುವರೆಯುತ್ತಿದೆ. ಪಾಕ್ ನಾಲ್ಕು ಪ್ಲುಟೋನಿಯಂ ಪ್ರೊಡಕ್ಷನ್ ರಿಯಾಕ್ಟರ್ ನ್ನು ಹೊಂದಿದ್ದರೆ, ಭಾರತದಲ್ಲಿ ಕೇವಲ 1 ಮಾತ್ರ ಇದೆ. ಪಾಕ್ಗೆ ವರ್ಷಕ್ಕೆ 20 ಪರಮಾಣು ಸಿಡಿತಲೆ ತಯಾರಿಸುವ ಸಾಮರ್ಥ್ಯವಿದ್ದರೆ, ಭಾರತ ಕೇವಲ ಐದನ್ನು ತಯಾರಿಸುತ್ತಿದೆ’ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಭಾರತದ ಬಗ್ಗೆ ಭಯ ಹೊಂದಿರುವ ಪಾಕ್ ಚೀನಾದ ಸಹಾಯ ಪಡೆದು ತನ್ನ ಪರಮಾಣು ಸಾಮರ್ಥ್ಯವನ್ನು ಹೆಚ್ಚುಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.