ನವದೆಹಲಿ: ಯುಕೆಯ ಗ್ಲಾಸ್ಗೋದಲ್ಲಿ ನಡೆಯುತ್ತಿರುವ COP26 ಶೃಂಗಸಭೆಯಲ್ಲಿ ಭಾರತವು ಬುಧವಾರ ‘ಇ-ಅಮೃತ್’ (Accelerated e-Mobility Revolution for India’s Transportation) ಎಂಬ ಎಲೆಕ್ಟ್ರಿಕ್ ವಾಹನಗಳ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
ಇ-ಅಮೃತ್ ಎಂಬುದು ಇವಿಗಳ ಅಳವಡಿಕೆ, ಅವುಗಳ ಖರೀದಿ, ಹೂಡಿಕೆಯ ಅವಕಾಶಗಳು, ನೀತಿಗಳು, ಸಬ್ಸಿಡಿಗಳು ಇತ್ಯಾದಿಗಳಂತಹ ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಎಲ್ಲಾ ಮಾಹಿತಿ ಒದಗಿಸುವ ತಾಣವಾಗಿದೆ.
ಪೋರ್ಟಲ್ ಅನ್ನು ನೀತಿ ಆಯೋಗ ಅಭಿವೃದ್ಧಿಪಡಿಸಿದೆ ಮತ್ತು ಯುಕೆ ಸರ್ಕಾರದ ಸಹಯೋಗದ ಜ್ಞಾನ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದೆ ಮತ್ತು ಎರಡು ದೇಶಗಳ ಪ್ರಧಾನ ಮಂತ್ರಿಗಳು ಸಹಿ ಮಾಡಿದ. ಯು-ಭಾರತ ಜಂಟಿ ಮಾರ್ಗಸೂಚಿ 2030 ರ ಭಾಗವಾಗಿದೆ.
ಪೋರ್ಟಲ್ ಪ್ರಕಾರ, ಭಾರತದಲ್ಲಿ, 7.96 ಲಕ್ಷಕ್ಕೂ ಹೆಚ್ಚು ಇವಿಗಳನ್ನು ನೋಂದಾಯಿಸಲಾಗಿದೆ ಮತ್ತು ಸುಮಾರು 1,800 ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಾಗಿದೆ.
“ಇ-ಅಮೃತ್ ಇವಿಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಇ-ಮೊಬಿಲಿಟಿಗೆ ಬದಲಾಗುದರಿಂದ ಆಗುವ ಪ್ರಯೋಜನಗಳ ಬಗ್ಗೆ ಗ್ರಾಹಕರನ್ನು ಸಂವೇದನಾಶೀಲಗೊಳಿಸುವ ಸರ್ಕಾರದ ಉಪಕ್ರಮಗಳಿಗೆ ಪೂರಕವಾಗಿದೆ” ಎಂದು ನೀತಿ ಆಯೋಗ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.