ನವದೆಹಲಿ: ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಲಾ ಕಮಿಷನ್ ಆಫ್ ಇಂಡಿಯಾ ಶೀಘ್ರದಲ್ಲಿ ಶಿಫಾರಸ್ಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಲಾ ಕಮಿಷನ್ ಈಗಾಗಲೇ 279 ಪುಟಗಳ ಕರುಡು ಪ್ರತಿಯನ್ನು ರಚಿಸಿದ್ದು, ಅದನ್ನು ತನ್ನ ಸದಸ್ಯರಿಗೆ ಹಂಚಿಕೆ ಮಾಡಿದೆ. ಮುಂದಿನ ವಾರ ಸರ್ಕಾರಕ್ಕೆ ಸಲ್ಲಿಸಲಿದೆ ಎನ್ನಲಾಗಿದೆ.
ಭಯೋತ್ಪಾದನ ಕೃತ್ಯದಲ್ಲಿ ಪಾಲ್ಗೊಂಡವರನ್ನು ಹೊರತುಪಡಿಸಿ ಇತರರ ಮರಣದಂಡನೆಯ ರದ್ಧತಿಗೆ ಇದು ಶಿಫಾರಸ್ಸು ಮಾಡಲಿದೆ ಎನ್ನಲಾಗಿದೆ.
ಅಪರಾಧಿಗೆ ನ್ಯಾಯಾಲಯಗಳು ಮರಣದಂಡನೆಯನ್ನು ನೀಡುವ ವಿಶ್ವದ 60 ದೇಶಗಳ ಪೈಕಿ ಭಾರತವೂ ಒಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.