ನವದೆಹಲಿ: ಅಪರಾಧ ಪ್ರಕರಣಗಳು, ಮದ್ಯ ಮತ್ತು ತಂಬಾಕು ಉತ್ಪನ್ನಗಳಂತಹ ಅಮಲು ಪದಾರ್ಥಗಳ ಸೇವನೆ ಅಧಿಕ ಜನ್ ಧನ್ ಖಾತೆಗಳನ್ನು ತೆರೆದಿರುವ ರಾಜ್ಯಗಳಲ್ಲಿ ಇಳಿಮುಖವಾಗಿದೆ ಎಂಬ ಅಂಶ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿಯಿಂದ ತಿಳಿದು ಬಂದಿದೆ.
“ಇದು ಜನ್ ಧನ್-ಆಧಾರ್-ಮೊಬೈಲ್ (JAM) ಕಾರಣದಿಂದ ಈ ಸಕಾರಾತ್ಮಕ ಬದಲಾವಣೆಗಳು ನಡೆದಿರಬಹುದು. ಜನ್ ಧನ್-ಆಧಾರ್-ಮೊಬೈಲ್ ಸರ್ಕಾರದ ಸಬ್ಸಿಡಿಗಳನ್ನು ಉತ್ತಮ ರೀತಿಯಲ್ಲಿ ತಲುಪುವಂತೆ ಮಾಡಲು ಸಹಾಯ ಮಾಡಿದೆ. ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮತ್ತು ತಂಬಾಕು ವೆಚ್ಚಗಳಂತಹ ಅನುತ್ಪಾದಕ ವೆಚ್ಚಗಳನ್ನು ತಗ್ಗಿಸಿದೆ” ಎಂದು ವರದಿ ಹೇಳಿದೆ.
“ಜನಧನ್ ಖಾತೆಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಅದರಲ್ಲಿ ಠೇವಣಿ ಹೆಚ್ಚಳದಿಂದಾಗಿ ಅಪರಾಧ ಪ್ರಕರಣ ಕಡಿಮೆಯಾಗಿದೆ ಎಂದು ಅಂದಾಜಿಸಬಹುದು” ಎಂದಿದೆ.
ಆರ್ಥಿಕ ಸೇರ್ಪಡೆ ವಿಷಯದಲ್ಲಿ ಭಾರತ ಈಗ ಚೀನಾಕ್ಕಿಂತ ಮುಂದಿದೆ ಎಂದು ಎಸ್ಬಿಐ ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.