ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನ್ಯಾಯಾಂಗ ಇಲಾಖೆಯು ನವೆಂಬರ್ 8 ರಿಂದ 14 ರವರೆಗೆ “ಟೆಲಿ ಲಾ ಆನ್ ವೀಲ್ಸ್” ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಭಾಗವಾಗಿ ವಿವಿಧ ಚಟುವಟಿಕೆಗಳ ಸರಣಿ ನಡೆಯಲಿದೆ. ತಮ್ಮ ಹಕ್ಕುಗಳನ್ನು ನ್ಯಾಯಸಮ್ಮತವಾಗಿ ಪಡೆಯಲು ಮತ್ತು ಜನರ ಕಷ್ಟಗಳ ಸಕಾಲಿಕ ಪರಿಹಾರಕ್ಕಾಗಿ ಸಲಹೆಯ ಮೂಲಕ ಜನರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಈ ಅಭಿಯಾನ ಒಳಗೊಂಡಿದೆ.
ಈ ಒಂದು ವಾರದ ಕಾಲ ನಿರ್ಗತಿಕರಿಗೆ ಮತ್ತು ಅನಾನುಕೂಲಕರ ಪರಿಸ್ಥಿತಿಯಲ್ಲಿ ಇರುವವರಿಗೆ ಸೇರಿದಂತೆ ಸರ್ವರಿಗೂ ಡಿಜಿಟಲ್ ಕಾನೂನು ಸಬಲೀಕರಣದ ಮೂಲಕ ನ್ಯಾಯವನ್ನು ಖಾತ್ರಿಪಡಿಸಲು ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮಗಳ ಸರಣಿಯಲ್ಲಿ ʼಟೆಲಿ ಲಾ ಆನ್ ವೀಲ್ಸ್ʼ ಅನ್ನು ನಡೆಸಲಾಗುತ್ತದೆ.
ಟೆಲಿ-ಕಾನೂನು ಸೇವೆಗಳನ್ನು ಒದಗಿಸುತ್ತಿರುವ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡುವಂತೆ ಜನರನ್ನು ಒತ್ತಾಯಿಸುವುದು, ಟೆಲಿ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯಗಳ ಮೂಲಕ ಕಾನೂನು ಸಲಹೆ ಮತ್ತು ಸಮಾಲೋಚನೆ ಪಡೆಯಲು ಅಗತ್ಯವಿರುವವರಿಗೆ ಪ್ರೋತ್ಸಾಹಿಸುವ ಈ ಅಭಿಯಾನವನ್ನು ದೇಶಾದ್ಯಂತ ಆಯೋಜಿಸಲಾಗಿದೆ. ಈ ಉದ್ದೇಶಕ್ಕಾಗಿ ಈ ಸಾಮಾನ್ಯ ಸೇವಾ ಕೇಂದ್ರಗಳನ್ನು ಕನೂನಿ ಸಲಾಹ್ ಸಹ್ಯಕ್ ಕೇಂದ್ರ ಎಂದು ಬ್ರಾಂಡ್ ಮಾಡಲಾಗಿದೆ. ಟೆಲಿ-ಲಾ ಆನ್ ವೀಲ್ಸ್ ಅಭಿಯಾನವನ್ನು ಸಾಮಾನ್ಯ ಸೇವಾ ಕೇಂದ್ರ ಆಡಳಿತದ ನೆರವಿನೊಂದಿಗೆ ನಡೆಸಲಾಗುತ್ತಿದೆ, ಇದು ದೇಶಾದ್ಯಂತ 4 ಲಕ್ಷ + ಡಿಜಿಟಲ್ ಸಕ್ರಿಯಗೊಳಿಸಿದ ಸಾಮಾನ್ಯ ಸೇವಾ ಕೇಂದ್ರಗಳ ಜಾಲವನ್ನು ಹೊಂದಿದೆ.
ಅಭಿಯಾನದ ಸಂದೇಶವನ್ನು ಪ್ರದರ್ಶಿಸುವ ವಿಶೇಷ ಮೊಬೈಲ್ ವ್ಯಾನ್ಗಳನ್ನು ಸಹ ಹೊರತರಲಾಗಿದೆ. ಈ ವ್ಯಾನ್ಗಳು ಪ್ರತಿನಿತ್ಯ 30-40 ಕಿಲೋಮೀಟರ್ಗಳಷ್ಟು ದೂರ ಕ್ರಮಿಸುತ್ತವೆ, ಟೆಲಿ-ಕಾನೂನಿನ ಮಾಹಿತಿ ಕರಪತ್ರಗಳನ್ನು ಹಂಚುತ್ತವೆ, ಟೆಲಿ-ಕಾನೂನು ಸೇವೆಗಳ ಕುರಿತು ಚಲನಚಿತ್ರಗಳು ಮತ್ತು ರೇಡಿಯೊ ಜಿಂಗಲ್ ಅನ್ನು ಪ್ರಸಾರ ಮಾಡುತ್ತವೆ.
Department of Justice launches “Tele-Law on Wheels” Campaign as a part of its weeklong Azadi Ka #AmritMahotsav celebrations from 8th to 14th November, 2021
Minister of Law and Justice to launch the @Tele_Law Mobile App on 13th November 2021
Details: https://t.co/hQocPvuCl2 pic.twitter.com/E1NBUYe8FC
— PIB India (@PIB_India) November 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.