ಮಿಯಾಮಿ: ಪ್ರಪಂಚದಾದ್ಯಂತ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಮುಂದಿನ 100-200 ವರ್ಷಗಳಲ್ಲಿ ಇದು ಒಂದು ಮೀಟರ್ಗಿಂತಲೂ ಹೆಚ್ಚು ಏರಿಕೆಯಾಗಲಿದೆ ಎಂಬುದನ್ನು ನಾಸಾದ ನೂತನ ಸೆಟ್ಲೈಟ್ ಡಾಟಾ ಸ್ಪಷ್ಟಪಡಿಸಿದೆ.
ಆದರೆ ಸಮುದ್ರ ಮಟ್ಟ ಏರಿಕೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನೂ ಅವರು ಹೇಳಿದ್ದಾರೆ.
ಹಿಮದ ಹಾಳೆ( Ice sheets )ಗಳು ಗ್ರೀನ್ಲ್ಯಾಂಡ್ ಮತ್ತು ಟಂಟಾರ್ಟಿಕದಲ್ಲಿ ಹಿಂದೆಂದಿಗಿಂತಲೂ ವೇಗದಲ್ಲಿ ಕರಗುತ್ತಿದೆ, ಸಾಗರಗಳು ಬಿಸಿಯಾಗುತ್ತಿವೆ ಮತ್ತು ಕಳೆದ ವರ್ಷಕ್ಕಿಂತಲೂ ವೇಗದಲ್ಲಿ ವಿಸ್ತಾರಗೊಳ್ಳುತ್ತಿದೆ ಎಂದು ನಾಸಾ ತಜ್ಞರು ಹೇಳಿದ್ದಾರೆ.
ಸಮುದ್ರ ಮಟ್ಟ ಏರಿಕೆಯಾಗುವುದರಿಂದ ವಿಶ್ವದಾದ್ಯಂತ ಆಳವಾದ ಪರಿಣಾಮ ಬೀರಲಿದೆ. 150ಮಿಲಿಯನ್ ಜನರಿಗೆ ಅದರಲ್ಲೂ ಪ್ರಮುಖವಾಗಿ ಪ್ರಸ್ತುತ ಸಮುದ್ರ ಮಟ್ಟದ ಒಂದು ಮೀಟರ್ ದೂರದಲ್ಲಿ ವಾಸಿಸುತ್ತಿರುವವ ಏಷ್ಯನ್ನರ ಮೇಲೆ ಇದು ಭೀಕರ ಪರಿಣಾಮ ಬೀರಲಿದೆ ಎಂದು ಅಂದಾಜಿಸಿದ್ದಾರೆ.
ತಗ್ಗು ಪ್ರದೇಶದಲ್ಲಿರುವ ಅಮೆರಿಕ ರಾಜ್ಯವಾದ ಫ್ಲೋರಿಡ ಕಣ್ಮರೆಯಾಘುವ ಅಪಾಯಕಾರಿ ಸ್ಥಿತಿಯಲ್ಲಿದೆ, ಸಿಂಗಾಪುರ ಮತ್ತು ಟೋಕಿಯೋಗೂ ಅಪಾಯವಿದೆ. ಫಿಸಿಫಿಕ್ ಐಸ್ಲ್ಯಾಂಡ್ಗಳೂ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮುಂಬರುವ ವರ್ಷಗಳಲ್ಲಿ ಪ್ರಪಂಚದ ಕರಾವಳಿ ಪ್ರದೇಶಗಳ ಚಿತ್ರಣವೇ ಬದಲಾಗಲಿದೆ. ನಮ್ಮ ಭವಿಷ್ಯ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.