ನವದೆಹಲಿ: ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ದೀಪಾವಳಿ ನೀರಸವಾಗಿತ್ತು, ಆದರೆ ಈ ಬಾರಿ ಬೆಳಕಿನ ಹಬ್ಬವು ಸಂತಸ ಮತ್ತು ಸಂಭ್ರಮವನ್ನು ಎಲ್ಲೆಡೆ ಪಸರಿಸಿದೆ. ಈ ಬಾರಿಯ ದೀಪಾವಳಿ ಭಾರತದ ಆರ್ಥಿಕತೆಗೂ ಪುನಃಶ್ಚೇತನ ನೀಡಿದೆ. ಹಬ್ಬದ ಮಾರಾಟವು 1.25 ಲಕ್ಷ ಕೋಟಿ ರೂ.ಗಳ ವ್ಯಾಪಾರವನ್ನು ಸೃಷ್ಟಿಸಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
“ಕಳೆದ ಎರಡು ವರ್ಷಗಳ ಅಂತರದ ನಂತರ, ಈ ವರ್ಷ ದೆಹಲಿ ಸೇರಿದಂತೆ ದೇಶಾದ್ಯಂತ ದೀಪಾವಳಿ ಹಬ್ಬವು ಹೊಸ ಉತ್ಸಾಹ ಮತ್ತು ತಾಜಾತನವನ್ನು ತಂದಿದೆ, ಕಳೆದ ಒಂದು ವಾರದಿಂದ ದೇಶಾದ್ಯಂತದ ಮಾರುಕಟ್ಟೆಗಳಲ್ಲಿ ಗ್ರಾಹಕರ ಹರಿವು ಅಗಾಧವಾಗಿತ್ತು ಮತ್ತು ಅವರು ತಮ್ಮ ಎರಡು ವರ್ಷಗಳ ಖರೀದಿಗಳ ಅಂತರವನ್ನು ಈ ಬಾರಿ ಸರಿದೂಗಿಸುತ್ತಿದ್ದಾರೆ ಎಂದು ತೋರುತ್ತದೆ, ”ಎಂದು CAIT ಹೇಳಿಕೆಯಲ್ಲಿ ತಿಳಿಸಿದೆ.
ದೀಪಾವಳಿಯ ಸಂದರ್ಭದಲ್ಲಿ ಕಳೆದ 10 ವರ್ಷಗಳಲ್ಲೇ ಇದು ದಾಖಲೆಯ ವ್ಯಾಪಾರದ ಅಂಕಿ ಅಂಶವಾಗಿದೆ, ದೆಹಲಿಯೊಂದರಲ್ಲೇ 25,000 ಕೋಟಿ ಮೌಲ್ಯದ ಮಾರಾಟವಾಗಿದೆ.
ಈ ವರ್ಷ 9000 ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಖರೀದಿಸಲಾಗಿದೆ. ಅಲ್ಲದೆ, ಈ ದೀಪಾವಳಿಯು ಪ್ಯಾಕೇಜಿಂಗ್ ಸರಕುಗಳಿಗಾಗಿ 15,000 ಕೋಟಿ ರೂಪಾಯಿಗಳ ಗಮನಾರ್ಹ ವ್ಯಾಪಾರವನ್ನು ತಂದಿದೆ.
“ಈ ಬಾರಿ ದೇಶಾದ್ಯಂತದ ಮಾರುಕಟ್ಟೆಗಳಲ್ಲಿ ಚೀನಾದ ಸರಕುಗಳು ಮಾರಾಟವಾಗಿಲ್ಲ ಮತ್ತು ಗ್ರಾಹಕರು ಭಾರತೀಯ ವಸ್ತುಗಳ ಖರೀದಿಗೆ ವಿಶೇಷ ಒತ್ತು ನೀಡಿದ್ದರು, ಇದರಿಂದಾಗಿ ಚೀನಾ 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವ್ಯವಹಾರದ ನೇರ ನಷ್ಟವನ್ನು ಅನುಭವಿಸಿತು” ಎಂದು CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ಟಿಯಾ ಹೇಳಿದ್ದಾರೆ.
ಸುಮಾರು 7 ಕೋಟಿ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸಿಎಐಟಿ, ಉತ್ತಮ ವ್ಯಾಪಾರದ ನಿರೀಕ್ಷೆಗಳ ಕಿಡಿಯನ್ನು ಈ ದೀಪಾವಳಿ ಎಬ್ಬಿಸಿದೆ ಎಂದು ಹೇಳಿದೆ.
“ಈ ಬೃಹತ್ ಶಾಪಿಂಗ್ ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಗಳಲ್ಲಿನ ವ್ಯಾಪಾರ ಕುಸಿತವನ್ನು ಕೊನೆಗೊಳಿಸಿದೆ. ಇದು ವ್ಯಾಪಾರ ಸಮುದಾಯದಲ್ಲಿ ಉತ್ತಮ ವ್ಯಾಪಾರ ನಿರೀಕ್ಷೆಗಳನ್ನು ಜಾಗೃತಗೊಳಿಸಿದೆ” ಎಂದಿದ್ದಾರೆ.
ಆನ್ಲೈನ್ ಚಿಲ್ಲರೆ ವ್ಯಾಪಾರಿಗಳು ಸಹ ಈ ವರ್ಷ ಉತ್ತಮ ವ್ಯಾಪಾರವನ್ನು ಮಾಡುತ್ತಿದ್ದಾರೆ. ಅಮೆಜಾನ್ ಪ್ರಕಾರ, ಹಬ್ಬದ ಸಂದರ್ಭದಲ್ಲಿ ಶ್ರೇಣಿ 2 ಮತ್ತು 3 ಪಟ್ಟಣಗಳಿಂದ 79% ಹೊಸ ಗ್ರಾಹಕರನ್ನು ಅದು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.