ಶ್ರೀನಗರ: ಉಗ್ರ ನಾವೇದ್ ಬೆನ್ನಲ್ಲೇ ಇದೀಗ ಪಾಕಿಸ್ಥಾನ ಮೂಲದ ಮತ್ತೊಬ್ಬ ಉಗ್ರನನ್ನು ಜಮ್ಮು ಕಾಶ್ಮೀರದಲ್ಲಿ ಭದ್ರತಾಪಡೆಗಳು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಉರಿ ಸೆಕ್ಟರ್ ಸಮೀಪ ನಾಲ್ವರು ಉಗ್ರರು ಭಾರತದೊಳಕ್ಕೆ ಒಳ ನುಸುಳಿದ್ದರು, ಇವರಲ್ಲಿ ಇಂದು ಬಂಧಿತನಾದ ಉಗ್ರನೂ ಒಬ್ಬ ಎಂದು ಹೇಳಲಾಗಿದೆ. ಈತನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಜ್ಜದ್ ಎಂದು ಈತನನ್ನು ಗುರುತಿಸಲಾಗಿದ್ದು, ಪೊಲೀಸರು ಮತ್ತು ಸೇನಾ ಸಿಬ್ಬಂದಿ ಜಂಟಿಯಾಗಿ ಈತನನ್ನು ರಫಿಯಾಬಾದ್ನಲ್ಲಿ ಬಂಧಿಸಿದ್ದಾರೆ.
ಇವರ ಗುಂಪು ನಿನ್ನೆ ಒಳ ನುಸುಳಿದ್ದು, ಬಾರಮುಲ್ಲಾದ ಪಂಜ್ಲಾದಲ್ಲಿ ಇವರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು, ಈ ವೇಳೆ ನಡೆದ ಎನ್ಕೌಂಟರ್ನಲ್ಲಿ 3 ಮಂದಿ ಹತರಾಗಿದ್ದಾರೆ.
ಭದ್ರತಾ ಪಡೆಗಳು ಈತನನ್ನು ವಿಚಾರಣೆಗೊಳಪಡಿಸುತ್ತಿವೆ. ಮೊಹಮ್ಮದ್ ನಾವೇದ್ ಬಳಿಕ ಸೆರೆಸಿಕ್ಕ ಎರಡನೇ ಉಗ್ರ ಈತನಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.