ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೋವಿಡ್-19 ಲಸಿಕೆ ಅಭಿಯಾನದ ಪರಿಶೀಲನಾ ಸಭೆಯನ್ನು ನಡೆಸಿದರು ಮತ್ತು ನಾವು ನಿರ್ಲಕ್ಷ್ಯ ವಹಿಸಿದರೆ 1 ಬಿಲಿಯನ್ ಲಸಿಕೆ ಡೋಸ್ಗಳ ನಂತರವೂ ಹೊಸ ಬಿಕ್ಕಟ್ಟು ಎದುರಾಗಬಹುದು ಎಂದು ಅವರು ಎಚ್ಚರಿಸಿದರು.
ಕಡಿಮೆ ಲಸಿಕಾ ಪ್ರಮಾಣವನ್ನು ಹೊಂದಿರುವ ಜಿಲ್ಲಾ ಮುಖ್ಯಸ್ಥರೊಂದಿಗಿನ ಈ ಸಭೆಯಲ್ಲಿ ಮಾತನಾಡಿದ ಮೋದಿ, “ಯಾವುದೇ ರೋಗ ಮತ್ತು ಶತ್ರುಗಳನ್ನು ನಾವು ಕಡೆಗಣಿಸಬಾರದು, ಕೊನೆಯವರೆಗೂ ಅವರ ವಿರುದ್ಧ ಹೋರಾಡಬೇಕು, ಹೀಗಾಗಿ ಸ್ವಲ್ಪ ನಿರ್ಲಕ್ಷ್ಯವೂ ಒಳ್ಳೆಯದಲ್ಲ” ಎಂದಿದ್ದಾರೆ.
“ಇದುವರೆಗಿನ ಪ್ರಗತಿಯ ನಿಮ್ಮ ಕಠಿಣ ಪರಿಶ್ರಮದಿಂದ ಸಾಧ್ಯವಾಗಿದೆ. ಆಡಳಿತದ ಪ್ರತಿಯೊಬ್ಬ ಸದಸ್ಯರು, ಆಶಾ ಕಾರ್ಯಕರ್ತರು ಬಹಳಷ್ಟು ಕೆಲಸ ಮಾಡಿದ್ದಾರೆ, ಮೈಲಿಗಟ್ಟಲೆ ನಡೆದು ದೂರದ ಸ್ಥಳಗಳಿಗೆ ಲಸಿಕೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ನಿರ್ಲಕ್ಷ್ಯ ಮಾಡಿದರೆ 1 ಬಿಲಿಯನ್ ಲಸಿಕೆ ನೀಡಿದ ನಂತರ ಹೊಸ ಬಿಕ್ಕಟ್ಟು ಸೃಷ್ಟಿಯಾಗಬಹುದು” ಎಂದಿದ್ದಾರೆ.
“ಕೊರೋನಾ ವಿರುದ್ಧದ ರಾಷ್ಟ್ರದ ಹೋರಾಟದಲ್ಲಿ ನಾವು ಹೊಸ ಪರಿಹಾರಗಳನ್ನು ಕಂಡುಕೊಂಡಿದ್ದೇವೆ, ನವೀನ ವಿಧಾನಗಳನ್ನು ಬಳಸಿದ್ದೇವೆ ಎಂಬುದು ಮಹತ್ವದ ವಿಷಯ. ನಿಮ್ಮ ಪ್ರದೇಶಗಳಲ್ಲಿ ಲಸಿಕೆಯನ್ನು ಹೆಚ್ಚಿಸಲು ನೀವು ಕೂಡ ನವೀನ ವಿಧಾನಗಳ ಬಗ್ಗೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ” ಎಂದು ಅವರು 40 ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.