ನವದೆಹಲಿ: ಮ್ಯಾನ್ಮಾರ್ನಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಹಿಂಸಾಚಾರ ಭುಗಿಲೇಳುವ ಅಪಾಯ ಎದುರಾಗಿದೆ. ಇದರಿಂದಾಗಿ ಆ ದೇಶದ ವಾಯುವ್ಯ ಭಾಗದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 37,000 ಜನರು ಈಗಾಗಲೇ ಮನೆ ಮಠ ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರರು ತಿಳಿಸಿದ್ದಾರೆ.
ಹೀಗೆ ಪಲಾಯನ ಮಾಡಿದವರಲ್ಲಿ ಬಹುತೇಕ ಮಂದಿ ಭಾರತಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
“ಮ್ಯಾನ್ಮಾರ್ ಮಿಲಿಟರಿ ಮತ್ತು ಚಿನ್ ರಾಜ್ಯದ, ಮ್ಯಾಗ್ವೇ ಮತ್ತು ಸಾಗಯಿಂಗ್ ಪ್ರದೇಶಗಳ ಸ್ಥಳೀಯ ರಕ್ಷಣಾ ಪಡೆಗಳ ನಡುವೆ ವಾಯುವ್ಯ ಭಾಗದಲ್ಲಿ ಸಂಘರ್ಷ ಭುಗಿಲೇಳುತ್ತಿರುವ ಬಗ್ಗೆ ಮ್ಯಾನ್ಮಾರಿನಲ್ಲಿ ಯುಎನ್ ತಂಡ ಕಳವಳಗೊಂಡಿದೆ” ಎಂದು ವಕ್ತಾರರು ಹೇಳಿದ್ದಾರೆ.
ಫೆಬ್ರವರಿ 1 ರಂದು ಮ್ಯಾನ್ಮಾರ್ ಮಿಲಿಟರಿ ಸರ್ಕಾರದ ಮೇಲೆ ನಿಯಂತ್ರಣ ಪಡೆದ ಒಂಬತ್ತು ತಿಂಗಳ ನಂತರ ಪಶ್ಚಿಮ ಚಿನ್ನ ತಂಟ್ಲಾಂಗ್ ಪಟ್ಟಣದಲ್ಲಿ ಹೆಚ್ಚಿನ ಜನರು ಸ್ಥಳಾಂತರಗೊಳ್ಳಲು ಮತ್ತು ಆಸ್ತಿಪಾಸ್ತಿ ನಾಶವಾಗಲು ಈ ಸಂಘರ್ಷ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ 160 ಕ್ಕೂ ಹೆಚ್ಚು ಜನರನ್ನು ಶೆಲ್ ದಾಳಿ ಮತ್ತು ಫೈರಿಂಗ್ ಮೂಲಕ ಹತ್ಯೆ ಮಾಡಿದ ಬಗ್ಗೆ ಆತಂಕಕಾರಿ ವರದಿಗಳು ಬರುತ್ತಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.