ಗ್ಲಾಸ್ಗೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಗ್ಲಾಸ್ಗೋದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ನಫ್ತಾಲಿ ಅವರು ಮೋದಿಗೆ, “ನೀವು ಇಸ್ರೇಲ್ನಲ್ಲಿ ತುಂಬಾ ಜನಪ್ರಿಯ ವ್ಯಕ್ತಿ, ಬನ್ನಿ ನನ್ನ ಪಕ್ಷ ಸೇರಿಕೊಳ್ಳಿ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
“ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮರುಪ್ರಾರಂಭಿಸಿದ ವ್ಯಕ್ತಿ, ಇದು ಎರಡು ಅನನ್ಯ ನಾಗರಿಕತೆಗಳಾದ ಭಾರತೀಯ ನಾಗರಿಕತೆ, ಯಹೂದಿ ನಾಗರಿಕತೆ ನಡುವಿನ ಆಳವಾದ ಸಂಬಂಧವಾಗಿದೆ ಮತ್ತು ಇದು ನಿಮ್ಮ ಹೃದಯದಿಂದ ಬಂದಿದೆ ಎಂದು ನನಗೆ ತಿಳಿದಿದೆ” ಎಂದು ಬೆನೆಟ್ ಮೋದಿಗೆ ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ನೇಪಾಳಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದರು.
ಪ್ರಧಾನಿ ಮೋದಿ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು IRIS ಮೂಲಸೌಕರ್ಯ ಉಪಕ್ರಮವನ್ನು ಪ್ರಾರಂಭಿಸಿದರು.
COP26 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಭಾನುವಾರ ಗ್ಲಾಸ್ಗೋ ತಲುಪಿದರು.
ಇಂದು, ಪ್ರಧಾನಿಯವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ – ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್ನ ಸೈಡ್ ಈವೆಂಟ್ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದಲ್ಲದೆ, ಪ್ರಧಾನಿ ಮೋದಿ ಅವರು “ಶುದ್ಧ ತಂತ್ರಜ್ಞಾನ ನಾವಿನ್ಯತೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುವುದು” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಂದು ರಾತ್ರಿ ವೇಳೆಗೆ ಪ್ರಧಾನಿ ದೆಹಲಿಗೆ ಮರಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.