ನವದೆಹಲಿ: ಪೂರ್ವ ಲಡಾಖ್ನಲ್ಲಿ ಚೀನಾ ವಿರುದ್ಧ ನಡೆಯುತ್ತಿರುವ ಮಿಲಿಟರಿ ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಿದ ಅಸಾಧಾರಣ ಸೇವೆಗಾಗಿ 260 ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರು ವಿಶೇಷ ಕಾರ್ಯಾಚರಣೆ ಪದಕಗಳನ್ನು ಪ್ರದಾನಿಸಿದ್ದಾರೆ.
ಗೃಹ ಸಚಿವಾಲಯವು ವಿವಿಧ ರಾಜ್ಯ ಪೊಲೀಸ್ ಮತ್ತು ಕೇಂದ್ರ ಪಡೆಗಳ ಒಟ್ಟು 397 ಸಿಬ್ಬಂದಿಯನ್ನು ಪ್ರಶಸ್ತಿಗೆ ಹೆಸರಿಸಿ ಅಧಿಸೂಚನೆಯನ್ನು ಹೊರಡಿಸಿದೆ.
ಮೇ 2020 ಮತ್ತು ಈ ವರ್ಷದ ಫೆಬ್ರವರಿ ನಡುವೆ ಪೂರ್ವ ಲಡಾಖ್ನಲ್ಲಿ “ಅದಮ್ಯ ಧೈರ್ಯ ಮತ್ತು ಕರ್ತವ್ಯದತ್ತ ಸಮರ್ಪಣೆ” ಯನ್ನು ಗುರುತಿಸಿ ಸೈನಿಕರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ITBP ವಕ್ತಾರರು ತಿಳಿಸಿದ್ದಾರೆ.
260 ಪದಕಗಳನ್ನು ಐಟಿಬಿಪಿ ಸಿಬ್ಬಂದಿಗೆ ನೀಡಲಾಗುತ್ತಿದೆ. ಇದು ಏಕಕಾಲದಲ್ಲಿ ಪೊಲೀಸ್ ಪಡೆಗೆ ನೀಡಿದ ಅತ್ಯಧಿಕ ಸಂಖ್ಯೆಯ ಪ್ರಶಸ್ತಿಯಾಗಿದೆ.
“ಐಟಿಬಿಪಿ ಸಿಬ್ಬಂದಿಗಳು ಹಿಮದ ಎತ್ತರದಲ್ಲಿ ‘ಸ್ನೋ ಲಿಯಪೋರ್ಡ್’ ಕಾರ್ಯಾಚರಣೆಯ ಮೂಲಕ ತೀವ್ರ ಪರಿಸ್ಥಿತಿಯಲ್ಲಿ ಲಡಾಖ್ ಗಡಿಯನ್ನು ಭದ್ರಪಡಿಸಿದ್ದಾರೆ. ಎಲ್ಲಾ ಸಹೋದರ ಸಂಸ್ಥೆಗಳ ನಡುವೆ ಸಂಪೂರ್ಣ ಸಮನ್ವಯ ಮತ್ತು ಸಹಕಾರದೊಂದಿಗೆ ಪಡೆ ಉನ್ನತ ಮಟ್ಟದ ಕಾರ್ಯತಂತ್ರದ ಯೋಜನೆ ಮತ್ತು ಪರಿಣಾಮಕಾರಿ ನೆಲದ ಕಾರ್ಯಾಚರಣೆಗಳನ್ನು ನಡೆಸಿದೆ, ”ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.