ನವದೆಹಲಿ: ದಾಖಲೆಯನ್ನು ನಿರ್ಮಿಸಿರುವ UPI ಅಕ್ಟೋಬರ್ನಲ್ಲಿ ಯುಎಸ್ಡಿ 100 ಬಿಲಿಯನ್ ವಹಿವಾಟು ಮೌಲ್ಯವನ್ನು ದಾಖಲಿಸಿದೆ.
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಮೂಲಕ ಮಾಡಿದ ಪಾವತಿಗಳ ಪ್ರಮಾಣವು ಸೆಪ್ಟೆಂಬರ್ನಲ್ಲಿ ನಡೆಸಿದ 3.66 ಬಿಲಿಯನ್ ವಹಿವಾಟುಗಳಿಗೆ ಹೋಲಿಸಿದರೆ, ಅಕ್ಟೋಬರ್ 2021 ರಲ್ಲಿ 4.22 ಬಿಲಿಯನ್ ವಾಹಿವಾಟುಗಳಿಗೆ ಏರಿಕೆ ಕಂಡಿದೆ.
ಒಟ್ಟಾರೆಯಾಗಿ, ಅಕ್ಟೋಬರ್ 2021 ರಲ್ಲಿ ವಹಿವಾಟಿನ ಮೌಲ್ಯವು ಸೆಪ್ಟೆಂಬರ್ನಲ್ಲಿ ಇದ್ದ ರೂ 6.54 ಲಕ್ಷ ಕೋಟಿಯಿಂದ ರೂ 7.71 ಲಕ್ಷ ಕೋಟಿಗೆ ಏರಿದೆ.
ಡಾಲರ್ ಮೌಲ್ಯದಲ್ಲಿ, UPI ಅಕ್ಟೋಬರ್ನಲ್ಲಿ ಸುಮಾರು ಯುಎಸ್ಡಿ 103 ಬಿಲಿಯನ್ ವಹಿವಾಟು ಮೌಲ್ಯದೊಂದಿಗೆ ಮೊದಲ ಬಾರಿಗೆ ಯುಎಸ್ಡಿ 100 ಬಿಲಿಯನ್ ಮಾಸಿಕ ವಹಿವಾಟುಗಳನ್ನು ದಾಟಿದೆ.
ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಲಾಕ್ಡೌನ್ ನಿರ್ಬಂಧಗಳಿಂದಾಗಿ ಯುಪಿಐ ವಹಿವಾಟುಗಳು ಕಡಿಮೆಯಾಗಿತ್ತು.
UPI ಎಂಬುದು ಭಾರತದಲ್ಲಿ ಬಳಸಲಾಗುವ ಮೊಬೈಲ್-ಆಧಾರಿತ ಕ್ಷಿಪ್ರ ಪಾವತಿ ವ್ಯವಸ್ಥೆಯಾಗಿದ್ದು, ಪ್ರತಿಯೊಬ್ಬ ಬಳಕೆದಾರರು ತಾವು ಉತ್ಪಾದಿಸುವ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸಿಕೊಂಡು ಯಾವುದೇ ಸಮಯದಲ್ಲಿ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಆರ್ಬಿಐ ಪ್ರಕಾರ, ಬ್ಯಾಂಕ್ ಖಾತೆಯ ಮಾಹಿತಿಯನ್ನು ರವಾನೆದಾರರು ಬಹಿರಂಗಪಡಿಸುವ ಅಪಾಯವನ್ನು ಇದು ನಿವಾರಿಸುತ್ತದೆ. UPI P2P ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು P2M ಅಥವಾ ವ್ಯಕ್ತಿಯಿಂದ ವ್ಯಾಪಾರಿ ಪಾವತಿಗಳನ್ನು ಅನುವು ಮಾಡುತ್ತದೆ, ಹಾಗೆಯೇ ಬಳಕೆದಾರರಿಗೆ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶ ನೀಡುತ್ತದೆ.
ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ನ ವರದಿಯ ಪ್ರಕಾರ UPI ಯ ಮಾರುಕಟ್ಟೆ ಪಾಲು ವಿತ್ತವರ್ಷ21 ರಲ್ಲಿ 73 ಪ್ರತಿಶತದಿಂದ ವಿತ್ತವರ್ಷ22 ರ ಆರಂಭಿಕ ನಾಲ್ಕು ತಿಂಗಳಲ್ಲಿ ಶೇಕಡಾ 80 ಕ್ಕೆ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.