ಲಕ್ನೋ: ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ತಾಲಿಬಾನ್ನಿಂದ ವಿಚಲಿತವಾಗಿದೆ. ಆದರೆ ಒಂದು ವೇಳೆ ಈ ಬಂಡುಕೋರ ಗುಂಪು ಭಾರತದ ತಂಟೆಗೆ ಬಂದರೆ ಭಾರತವು ವೈಮಾನಿಕ ದಾಳಿ ನಡೆಸಲು ಸಿದ್ಧವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.
“ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಶಕ್ತಿಯುತವಾಗಿದೆ ಮತ್ತು ಯಾವುದೇ ದೇಶವು ಭಾರತದತ್ತ ಕಣ್ಣು ಹಾಕಲು ಧೈರ್ಯ ಮಾಡುತ್ತಿಲ್ಲ, ಇಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್ನಿಂದ ತೊಂದರೆಗೀಡಾಗಿದೆ. ಭಾರತದ ಕಡೆಗೆ ಅದು ತಿರುಗಿದರೆ ಭಾರತವು ವೈಮಾನಿಕ ದಾಳಿ ನಡೆಸಲು ಸಿದ್ಧವಾಗಿದೆ”ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದ ಅವರು, “ರಾಮ ಭಕ್ತರನ್ನು ಹತ್ಯೆ ಮಾಡಿದವರಿಗೆ ದೇಶದ ಜನರಲ್ಲಿ ಕ್ಷಮೆ ಕೇಳುವ ಧೈರ್ಯವಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.