ಬೆಂಗಳೂರು : ದೇಶದ ಎಲ್ಲಾ ವಲಯಗಳಂತೆ ಅಂಚೆಯಲ್ಲೂ ಕೂಡ ಪರಿವರ್ತನೆಗಳು ಬರುತ್ತಿವೆ. ದೇಶದಲ್ಲೇ ಮೊದಲು ಎಂಬಂತೆ ಬೆಂಗಳೂರಿನ ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳು ಇ-ಬೈಕ್ ಮೂಲಕ ಪೋಸ್ಟ್ಗಳನ್ನು ವಿತರಣೆ ಮಾಡಿದ್ದಾರೆ.
ಬೆಂಗಳೂರಿನ ಜೆಪಿನಗರದ ಉಪ ಅಂಚೆ ಕಚೇರಿ ಸಿಬ್ಬಂದಿಗಳು ಎಲೆಕ್ಟ್ರಿಕ್ ಬೈಕ್ ಮೂಲಕ ಪೋಸ್ಟ್ಗಳನ್ನು ವಿತರಿಸಲು ಆರಂಭಿಸಿದ್ದಾರೆ. ಈ ಅಂಚೆ ಕಛೇರಿಯಲ್ಲಿ ಒಟ್ಟು 15 ಪೋಸ್ಟ್ಮೆನ್ ಮತ್ತು ಪೋಸ್ಟ್ವುಮೆನ್ಗಳು ನೀಲಿ ಬಣ್ಣದ ಯುಲು ಬೈಕ್ಗಳಲ್ಲಿ ಪೋಸ್ಟ್ಗಳನ್ನು ವಿತರಣೆ ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಈ ಕಾರ್ಯ ನಡೆಯುತ್ತಿದೆ.
ಅಕ್ಟೋಬರ್ 14 ರಿಂದ ಈ ಕಾರ್ಯ ಆರಂಭವಾಗಿದೆ. ಇದು ಯಶಸ್ವಿಯಾದರೆ ಬೆಂಗಳೂರು ನಗರದ ಇತರ ಅನೇಕ ಅಂಚೆ ಕಚೇರಿಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ.
ವಸ್ತುಗಳನ್ನು ವಿತರಿಸಲು ಇಂಧನ-ಚಾಲಿತ ದ್ವಿಚಕ್ರ ವಾಹನಗಳನ್ನು ಬಳಸುವುದಕ್ಕೆ ಹೋಲಿಸಿದರೆ ಇದು ಆರ್ಥಿಕವಾಗಿ ಉತ್ತಮವೆಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಅಂಚೆ ಕಛೇರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯುಲು ಸಂಸ್ಥೆ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.