ನವದೆಹಲಿ: ಮಾಧ್ಯಮ ವರದಿಗಳ ಬಳಿಕ ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ.
ಇಸ್ಲಾಮಿಕ್ ಬೋಧನೆಗಳನ್ನು ಉತ್ತೇಜಿಸುತ್ತಿದ್ದ ‘ಅಚ್ಚಿ ಬಾತೇಂ’ ಹೆಸರಿನ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ನಿಂದ ಅಳಿಸಲಾಗಿದೆ.
ಇದು ಆಂಡ್ರಾಯ್ಡ್ನಲ್ಲಿ 5,000 ಕ್ಕೂ ಹೆಚ್ಚು ಡೌನ್ಲೋಡ್ಗಳನ್ನು ಕಂಡಿದೆ. ಈ ಆ್ಯಪ್ ಹಲವಾರು ಪಾಕಿಸ್ಥಾನಿ ಮೂಲದ ಧಾರ್ಮಿಕ ಮುಖಂಡರ ಉಪದೇಶಗಳನ್ನು ಹೊಂದಿತ್ತು. ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಯೊಂದಿಗೆ ಈ ಆ್ಯಪ್ನ ಡೆವಲಪರ್ಗಳು ಹೊಂದಿದ ಗುಪ್ತ ಸಂಪರ್ಕವನ್ನು ಮಾಧ್ಯಮಗಳು ಬಹಿರಂಗಪಡಿಸಿದ್ದವು.
ಹೊರಗಿನಿಂದ ಈ ಮೊಬೈಲ್ ಅಪ್ಲಿಕೇಶನ್ ಜೈಶ್ ಸಂಘಟನೆಯೊಂದಿಗೆ ಯಾವುದೇ ಮುಕ್ತ ಸಂಬಂಧವನ್ನು ಪ್ರದರ್ಶಿಸುವುದಿಲ್ಲ. ಆದರ ಮೊಬೈಲ್ ಅಪ್ಲಿಕೇಶನ್ನ ಡೆವಲಪರ್ಗಳು ತಮ್ಮ ಪೇಜ್ನಲ್ಲಿ ಎರಡು ಲಿಂಕ್ಗಳನ್ನು ಹೋಸ್ಟ್ ಮಾಡಿದ್ದಾರೆ, ಇದರಲ್ಲಿ ಜೆಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬರೆದ ಹಲವಾರು ಪುಸ್ತಕಗಳ ಸಾಫ್ಟ್ ಕಾಪಿಗಳಿವೆ.
ಡೆವಲಪರ್ ಪೇಜ್ನಲ್ಲಿನ ಎರಡನೇ ಲಿಂಕ್ನಲ್ಲಿ ಮಸೂದ್ ಅಜರ್, ಅವನ ಸಹೋದರ ಅಬ್ದುಲ್ ರೌಫ್ ಅಸ್ಗರ್ ಮತ್ತು ಅವರ ನಿಕಟ ಸಹವರ್ತಿ ತಲ್ಹಾ ಸೈಫ್ ಅವರುಗಳ ಧ್ವನಿ ರೆಕಾರ್ಡಿಂಗ್ ಕೂಡ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.