ನವದೆಹಲಿ: ಧರ್ಮದ ಆಫೀಮನ್ನು ತಲೆಗತ್ತಿಸಿಕೊಂಡ ಪಾಕಿಸ್ಥಾನಿಗಳು ಕ್ರೀಡೆಯಲ್ಲೂ ಧರ್ಮವನ್ನು ತುರುಕಿಸಿ ಜಗತ್ತಿನ ಮುಂದೆ ನಗೆಪಾಟಲಿಗೀಡಾಗುತ್ತಿದ್ದಾರೆ. ಪಾಕಿಸ್ಥಾನದ ಕ್ರಿಕೆಟ್ ಲೆಜೆಂಡ್ ಎಂದೇ ಕರೆಯಲ್ಪಡುವ ವಾಖರ್ ಯೂನಿಸ್ ನೀಡಿರುವ ಜಿಹಾದಿ ಮನಸ್ಥಿತಿಯ ಹೇಳಿಕೆ ಕ್ರೀಡಾ ಪ್ರಿಯರನ್ನು ಆಕ್ರೋಶಕ್ಕೀಡುಮಾಡಿದೆ.
ಟಿ20 ವಿಶ್ವಕಪ್ನಲ್ಲಿ ಭಾರತದ ಎದುರು ಮೊದಲ ಬಾರಿಗೆ ಜಯಗಳಿಸಿರುವ ಪಾಕಿಸ್ಥಾನ ಗೆಲುವಿನ ಉನ್ಮಾದದಲ್ಲಿ ತೇಲಾಡುತ್ತಿದೆ. ಇದೇ ಉನ್ಮಾದದಲ್ಲಿ “ಮೊಹಮ್ಮದ್ ರಿಜ್ವಾನ್ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ವಿಶೇಷವಾಗಿತ್ತು” ಎಂದು ವಾಖರ್ ಯೂನಿಸ್ ಹೇಳಿದ್ದಾನೆ.
ಈತನ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ.
ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಟ್ವೀಟ್ ಮಾಡಿ, ಇದು ಜಿಹಾದಿ ಮನಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಕಮೆಂಟೇಟರ್ ಹರ್ಷ ಭೋಗ್ಲೆ ಅವರು, ವಾಖರ್ ಯೂನಿಸ್ ಅವರ ಹೇಳಿಕೆ ಬೇಸರ ತರಿಸಿದೆ ಎಂದಿದ್ದಾರೆ.
"Hinduon ke beech me khade hoke namaaz padi, that was very very special for me" – Waqar .
Takes jihadi mindset of another level to say this in a sport. What a shameful man.— Venkatesh Prasad (@venkateshprasad) October 26, 2021
For a person of Waqar Younis' stature to say that watching Rizwan offering namaz in front of Hindus was very special to him, is one of the most disappointing things I have heard. A lot of us try hard to play such things down and talk up sport and to hear this is terrible.
— Harsha Bhogle (@bhogleharsha) October 26, 2021
ಹೀಗೆ ಎಲ್ಲಾ ಕಡೆಗಳಿಂದ ಆಕ್ರೋಶ ವ್ಯಕ್ತವಾದ ಬಳಿಕ ವಾಖರ್ ಯೂನಿಸ್ ತಮ್ಮ ಹೇಳಿಕೆಯ ಬಗ್ಗೆ ಕ್ಷಮಾಪಣೆ ಕೇಳಿದ್ದಾರೆ.
ನಾನು ಹೇಳಿದ ಮಾತು ಯಾರ ಭಾವನೆಗಳಿಗಾದರು ಧಕ್ಕೆ ತಂದಿದ್ದಾರೆ ನಾನು ಕ್ಷಮೆಯಾಚಿಸುತ್ತೇನೆ. ಧರ್ಮ, ಬಣ್ಣ ಮತ್ತು ಜನಾಂಗದ ಭೇದವಿಲ್ಲದೆ ಕ್ರೀಡೆ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದಿದ್ದಾರೆ.
In the heat of the moment, I said something which I did not mean which has hurt the sentiments of many. I apologise for this, this was not intended at all, genuine mistake. Sports unites people regardless of race, colour or religion. #apologies 🙏🏻
— Waqar Younis (@waqyounis99) October 26, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.