ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶದ 7 ದೇಶೀಯ ಕೋವಿಡ್-19 ಲಸಿಕೆ ತಯಾರಕರೊಂದಿಗೆ ಸಭೆ ನಡೆಸಲಿದ್ದಾರೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡಿ ಲ್ಯಾಬೋರೇಟರೀಸ್, ಝೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಜಿನ್ನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯ ಬಯೋಟೆಕ್ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಭಾರತವು 100 ಕೋಟಿ ಲಸಿಕೆ ಡೋಸ್ ಅನ್ನು ನೀಡಿ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಮೋದಿ ಈ ಸಭೆ ನಡೆಸುತ್ತಿದ್ದಾರೆ.
ಮೋದಿಯವರು ಭಾರತದಲ್ಲಿ ಅರ್ಹ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಹಾಕುವ ಮಾರ್ಗಗಳ ಬಗ್ಗೆ ಈ ಸಭೆಯಲ್ಲಿಒತ್ತು ನೀಡುವ ಸಾಧ್ಯತೆಯಿದೆ.
ಬೆಳಿಗ್ಗೆ 7 ಗಂಟೆಗೆ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ -19 ಲಸಿಕೆ ಡೋಸ್ 101.30 ಕೋಟಿ ಮೀರಿದೆ.
PM Narendra Modi will meet seven Indian COVID-19 vaccine manufacturers later today, a meeting that comes in the wake of the country achieving the landmark of administering 100 crore doses: Official sources
— Press Trust of India (@PTI_News) October 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.