ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತಮ ಆಡಳಿತದ 20 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥ ಬಿಜೆಪಿಯ ‘ಸೇವಾ ಹಿ ಸಂಘಟನೆ’ ಕಾರ್ಯಕ್ರಮದ ಅಡಿಯಲ್ಲಿ ಗೃಹ ಸಚಿವ ಅಮಿತ್ ಶಾ ಇಂದು ‘ಮೋದಿ ವ್ಯಾನ್’ಗೆ ಚಾಲನೆ ನೀಡಿದರು.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಮೊಬೈಲ್ ವೈದ್ಯಕೀಯ ವ್ಯಾನ್ಗಳು ಕಾರ್ಯನಿರ್ವಹಿಸಲಿವೆ.
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ನಡೆಸುತ್ತಿರುವ ಕೌಶಂಬಿ ವಿಕಾಸ ಪರಿಷತ್ತಿನ ನೇತೃತ್ವದಲ್ಲಿ ಈ ವ್ಯಾನ್ಗಳು ಕಾರ್ಯನಿರ್ವಹಿಸಲಿವೆ.
ಕೌಶಂಬಿ ಜಿಲ್ಲೆಯಾದ್ಯಂತ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಐದು ವ್ಯಾನ್ಗಳನ್ನು ನಿರ್ವಹಿಸಲಾಗುತ್ತದೆ, ಪ್ರತಿ ಕ್ಷೇತ್ರಕ್ಕೆ ಒಂದು ವ್ಯಾನ್ ಇರಲಿದೆ. ಇವುಗಳನ್ನು ಕಂಟ್ರೋಲ್ ಆಫೀಸಿನಿಂದ ನಿರ್ವಹಿಸಲಾಗುತ್ತದೆ. ಪ್ರಧಾನಿ ಮೋದಿಯವರ ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಪ್ರತಿ ವ್ಯಾನ್ 32 ಇಂಚಿನ ಟೆಲಿವಿಷನ್ ಮತ್ತು ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಹೊಂದಿದೆ.
ದೂರದಲ್ಲಿರುವ ಹಳ್ಳಿಗಳಲ್ಲಿ ಕರೋನವೈರಸ್ ಕಾಯಿಲೆಯ ವಿರುದ್ಧದ ಲಸಿಕೆಯನ್ನು ಉತ್ತೇಜಿಸುವಲ್ಲಿ ಮೋದಿ ವ್ಯಾನ್ ಸಹಾಯ ಮಾಡುತ್ತದೆ. ವಾಹನವು ಟೆಲಿಮೆಡಿಸಿನ್ ಅನ್ನು ಹೊಂದಿದೆ, ಜೊತೆಗೆ ಒಂದು ಸಲ 39 ರಕ್ತದ ಮಾದರಿಗಳನ್ನು ಪರೀಕ್ಷಿಸುವ ಯಂತ್ರವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
जनसेवा में मोदी जी के 20 वर्ष पूर्ण होने पर सेवा ही संगठन के अंतर्गत कौशांबी से भाजपा सांसद श्री @BJPVinodSonkar द्वारा बनवाई गयी मेडिकल वैन 'मोदी वैन' को हरी झंडी दिखाकर जनता को समर्पित किया।
क्षेत्रवासियों को उनके द्वार तक स्वास्थ्य सेवाएं पहुँचाने हेतु यह बहुत सराहनीय पहल है। pic.twitter.com/wbAzslekcb
— Amit Shah (@AmitShah) October 19, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.