ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿವರ್ಷ ರಾಮನವಮಿಯಂದು ಸೂರ್ಯರಶ್ಮಿ ಗರ್ಭಗುಡಿಯ ರಾಮಲಲ್ಲ ಮೇಲೆ ಬಿದ್ದು ಪ್ರಜ್ವಲಿಸುವ ರೀತಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ಒರಿಸ್ಸಾದಲ್ಲಿನ ಕೊನಾರ್ಕ್ ಸೂರ್ಯ ದೇಗುಲದಲ್ಲಿ ಸೂರ್ಯಕಿರಣಗಳು ದೇವಾಲಯವನ್ನು ಪ್ರವೇಶಿಸುವ ರೀತಿಯಲ್ಲೇ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲೂ ಕೂಡ ಸೂರ್ಯರಶ್ಮಿ ದೇಗುಲವನ್ನು ಪ್ರಜ್ವಲಿಸಲಿದೆ. ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು ಮತ್ತು ತಾಂತ್ರಿಕ ತಜ್ಞರೊಂದಿಗೆ ಸಮಾಲೋಚಿಸಿ ರಾಮನವಮಿಯಂದು ಸೂರ್ಯರಶ್ಮಿ ದೇಗುಲದೊಳಗೆ ಪ್ರವೇಶಿಸುವಂತೆ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
“ಕೊನಾರ್ಕದ ಸೂರ್ಯ ದೇಗುಲ ಸೂರ್ಯರಶ್ಮಿ ದೇಗುಲ ಪ್ರವೇಶಿಸುವುದಕ್ಕೆ ಒಂದು ಉದಾಹರಣೆ. ಇದೇ ರೀತಿ, ಎಲ್ಲಾ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ರಾಮನವಮಿಯಂದು ಸೂರ್ಯರಶ್ಮಿ ಮಂದಿರ ಪ್ರವೇಶಿಸುವ ಮಾದರಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ” ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.
2023 ರ ಅಂತ್ಯದ ವೇಳೆಗೆ ರಾಮ ಮಂದಿರದ ಗರ್ಭಗುಡಿ ಭಕ್ತರಿಗೆ ಮುಕ್ತವಾಗಲಿದೆ ಮತ್ತು ಸಂಪೂರ್ಣ ನಿರ್ಮಾಣವು 2025ರ ವೇಳೆಗೆ ಪೂರ್ಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.