ಗುವಾಹಟಿ: ಪಾಕಿಸ್ಥಾನದ ಕುಖ್ಯಾತ ಬೇಹುಗಾರಿಕೆ ಸಂಸ್ಥೆ ಐಎಸ್ಐ ಮತ್ತು ಇಸ್ಲಾಮಿಕ್ ಭಯೋತ್ಪಾದಕ ಗುಂಪು ಅಲ್-ಕೈದಾ ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಸರಣಿ ದಾಳಿ ನಡೆಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಐಎಸ್ಐ ಮತ್ತು ಅಲ್-ಖೈದಾ ಸರಣಿ ದಾಳಿಯ ಸಂಚಿನ ಬಗ್ಗೆ ಅಸ್ಸಾಂ ಪೊಲೀಸರು ದೃಢೀಕೃತ ಮಾಹಿತಿ ಪಡೆದುಕೊಂಡಿದ್ದಾರೆ. ಪೋಲಿಸ್ ಗುಪ್ತಚರ ಇಲಾಖೆಯು ಪಡೆದ ಮಾಹಿತಿಯ ಪ್ರಕಾರ, ಐಎಸ್ಐ ಉಗ್ರರು ಆರ್ ಎಸ್ ಎಸ್ ಕಾರ್ಯಕರ್ತರು ಮತ್ತು ಅಸ್ಸಾಂ ಮತ್ತು ಭಾರತದ ಇತರ ಭಾಗಗಳಲ್ಲಿ ಸೇನಾ ಪ್ರದೇಶಗಳನ್ನು ಗುರಿಯಾಗಿಸುವ ಹೊಂಚು ಹಾಕಿದೆ. ಮತ್ತೊಂದೆಡೆ, ಅಲ್-ಕೈದಾ ಹಿಂದೂ ಧಾರ್ಮಿಕ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಗುರಿಯಾಗಿಸಿಕೊಂಡು ಬಾಂಬ್ಗಳು ಮತ್ತು ಐಇಡಿ ಸ್ಫೋಟಗಳನ್ನು ನಡೆಸಲೀ ಹೊಂಚು ಹಾಕಿದೆ.
ಅಲ್-ಖೈದಾ ಮತ್ತು ಐಎಸ್ಐನ ದಾಳಿ ಸಂಚಿನ ಬಗ್ಗೆ ಅಸ್ಸಾಂ ಪೊಲೀಸರ ವಿಶೇಷ ಶಾಖೆ (ಎಸ್ಬಿ) ಇಂಟೆಲ್ ಮಾಹಿತಿ ಪಡೆದ ನಂತರ, ಅಸ್ಸಾಂ ಪೊಲೀಸ್ ಪ್ರಧಾನ ಕಛೇರಿಯು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರೆಡ್ ಅಲರ್ಟ್ಗಳನ್ನು ಕಳುಹಿಸಿದೆ.
ಅಸ್ಸಾಂ ಪೊಲೀಸ್ ಗುಪ್ತಚರ ವಿಭಾಗವು ಅಲ್-ಖೈದಾ ಮಾಧ್ಯಮ ವಿಭಾಗವಾದ “ಆಸ್-ಸಾಹಬ್” ನಿಂದ ಪ್ರಕಟಿಸಲ್ಪಟ್ಟ ಅತ್ಯಂತ ಪ್ರಚೋದನಕಾರಿ ವೀಡಿಯೊ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಹಾದ್ಗೆ ಕರೆ ನೀಡಲಾಗಿದೆ. ಮುಸ್ಲಿಂ ಯುವಕರನ್ನು ಪ್ರಚೋದಿಸಲು ಪ್ರಯತ್ನಿಸಲಾಗಿದೆ ಮತ್ತು ಭಾರತೀಯ ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಚಿತ್ರಗಳನ್ನು ಇದರಲ್ಲಿ ತೋರಿಸಲಾಗಿದೆ.
ಗುಪ್ತಚರ ವಿಭಾಗವನ್ನು ನಿರ್ವಹಿಸು ಅಸ್ಸಾಂ ಪೊಲೀಸ್ ವಿಶೇಷ ಶಾಖೆಯ (ಎಸ್ಬಿ) ಮೂಲಗಳು ಅಕ್ಟೋಬರ್ 6 ರಂದು ಅಸ್ಸಾಂನಲ್ಲಿ ಐಎಸ್ಐ ಮತ್ತು ಅಲ್-ಖೈದಾ ಪ್ರತ್ಯೇಕ ದಾಳಿಗಳ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಪಡೆದುಕೊಂಡಿವೆ. ಸೇನಾ ಗುಪ್ತಚರ ಸೇರಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳು, ರಾಜ್ಯದಲ್ಲಿ ಐಎಸ್ಐ ಮತ್ತು ಅಲ್-ಖೈದಾ ಯೋಜಿಸಿರುವ ದಾಳಿಗಳ ಬಗ್ಗೆ ಅಸ್ಸಾಂ ಪೊಲೀಸರನ್ನು ಎಚ್ಚರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.