ಕಾಸರಗೋಡು: ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ಬಗ್ಗೆ ವಿಸ್ತೃತ ಮಾಹಿತಿ ನೀಡುವ ಪರಿಕ್ರಮ ಸಂತ’ ಯೂಟ್ಯೂಬ್ ವಿಡಿಯೋವನ್ನು ವಿಭಾಗ ಸಂಘಚಾಲಕರು, ಮಂಗಳೂರು ವಿಭಾಗ ಮಾನ್ಯ ಗೋಪಾಲ ಚೆಟ್ಟಿಯಾರ್ ಪೆರ್ಲ ಅವರು ಅನಾವರಣಗೊಳಿಸಿದರು.
ನೀರ್ಚಾಲಿನ ಮಹಾಜನ ಸಂಸ್ಕೃತ ವಿದ್ಯಾಲಯದಲ್ಲಿ ವಿಡಿಯೋ ಅನಾವರಣದ ಸರಳ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಉಪಸ್ಥಿತರಿದ್ದ ರಾ.ಸ್ವ.ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅವರು ಮಾತನಾಡಿ, ಪರಿಕ್ರಮ ಸಂತ ಸೀತಾರಾಮ ಕೆದಿಲಾಯರು ದೇಶದ ಉದ್ದಗಲಕ್ಕೂ ಸಂಚರಿಸಿ ಗ್ರಾಮಗಳ ಮಹತ್ವವನ್ನು ಸಾರಿದ ಪರಿ ಅನನ್ಯ. ಭಾವಿ ಭಾರತಕ್ಕೆ ಗ್ರಾಮಗಳೇ ಆಧಾರ. ಗ್ರಾಮಗಳು ದೇಶದ ಸಾಂಸ್ಕೃತಿಕತೆಯ ಪ್ರತೀಕ ಮತ್ತು ಕೇಂದ್ರಗಳು. ಇಷ್ಟು ಮಾತ್ರವಲ್ಲದೆ ಗೋ ಸಂಪತ್ತು, ಸಸ್ಯ ಸಂಪತ್ತು ಸಹಿತ ಕೃಷಿ ಆಧರಿತ ಆರ್ಥಿಕತೆಗೂ ರಹದಾರಿ ಗ್ರಾಮಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾ.ಸ್ವ. ಸಂಘದ ಹಿರಿಯರಾದ ಬಾಲಕೃಷ್ಣ ಏಣಿಯರ್ಪು, ಸುಶೀರಾ ಎಡಿಟರ್ ಮಹೇಶ ಕೃಷ್ಣ ತೇಜಸ್ವಿ, ಚಿತ್ರ ಕಲಾವಿದ ವಿಶ್ವಾಸ್ ಎಂ., ವಿವೇಕಾದಿತ್ಯ, ವಿಜೇಶ್ ಬಿ.ಕೆ. ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.