ನವದೆಹಲಿ: ಬಾಂಗ್ಲಾದೇಶದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ನಡೆದ ಹಿಂಸೆಯನ್ನು ಇಸ್ಕಾನ್ ನ್ಯಾಷನಲ್ ಕಮ್ಯುನಿಕೇಶನ್ ನಿರ್ದೇಶಕ ವ್ರಜೇಂದ್ರ ನಂದನ್ ದಾಸ್ ಅವರು ಖಂಡಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಹಿಂದೂ ಭಕ್ತರನ್ನು ಕೊಲ್ಲುವುದು ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಅವರು, ಘಟನೆಯ ಸಮಯದಲ್ಲಿ ಭಕ್ತರು ಸಹಾಯಕ್ಕಾಗಿ ಕೂಗಿದರು, ಪೊಲೀಸರಿಗೆ ಕರೆ ಮಾಡಿದರು, ಆದರೆ ಪೊಲೀಸರಿಂದ ಯಾವುದೇ ಸ್ಪಂದನೆ ಬರಲಿಲ್ಲ ಎಂದಿದ್ದಾರೆ.
“ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆ ತಪ್ಪು. ಹಿಂಸೆ, ವಿಧ್ವಂಸಕ ಕೃತ್ಯಗಳು ಮುಗಿದಾದ ಮೇಲೆ ಪೊಲೀಸರು ಸ್ಥಳಕ್ಕೆ ಬಂದರು “ಎಂದು ದಾಸ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿನ ಬಹುಸಂಖ್ಯಾತ ಸಮುದಾಯವು ಹಿಂದೂ ಹಬ್ಬಗಳ ಸಂದರ್ಭದಲ್ಲಿ ಗಲಭೆ ಸೃಷ್ಟಿಸುತ್ತವೆ ಎಂದು ದಾಸ್ ಹೇಳಿದ್ದಾರೆ.
ಬಾಂಗ್ಲಾದ ನೊಹಕಲಿ ಪ್ರದೇಶದಲ್ಲಿ ಇಸ್ಕಾನ್ ದೇವಾಲಯದ ಮೇಲೆ ಧರ್ಮಾಂಧರ ಗುಂಪು ಶುಕ್ರವಾರ ದಾಳಿ ನಡೆಸಿದ್ದು, ಒರ್ವ ಭಕ್ತನನ್ನು ಹತ್ಯೆಮಾಡಿದೆ.
ಮಾತ್ರವಲ್ಲದೆ ನವರಾತ್ರಿ ಸಂದರ್ಭದಲ್ಲಿ ಹಲವಾರು ದುರ್ಗಾ ಪೆಂಡಲ್ಗಳನ್ನು ಕೂಡ ಮತಾಂಧರು ಧ್ವಂಸ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.