ನವದೆಹಲಿ: ಭೌಗೋಳಿಕ ಮಾಹಿತಿ ವ್ಯವಸ್ಥೆಯಲ್ಲಿ ಹವಾಮಾನ ಮಾಹಿತಿ ಸಂಯೋಜನೆಗಾಗಿ ಹವಾಮಾನ ಸ್ಥಿತಿಸ್ಥಾಪನೆ ಮಾಹಿತಿ ವ್ಯವಸ್ಥೆ ಮತ್ತು ಯೋಜನಾ CRISP-Mಗೆ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಬುಧವಾರ ಚಾಲನೆ ನೀಡಿದ್ದಾರೆ. ಇದು ಮಹಾತ್ಮ ಗಾಂಧಿ NREGA ಅಡಿಯಲ್ಲಿ GIS- ಆಧಾರಿತ ಜಲಾನಯನ ಯೋಜನೆಯಾಗಿದೆ.
ಯುಕೆ ವಿದೇಶಾಂಗ ಸಚಿವಾಲಯದ ಸೌತ್ ಏಷ್ಯಾ ಮತ್ತು ಕಾಮನ್ವೆಲ್ತ್ಗಾಗಿನ ಸಚಿವ ಲಾರ್ಡ್ ತಾರೀಖ್ ಅಹ್ಮದ್ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ.
ಈ ಮಾತನಾಡಿದ ಸಿಂಗ್, ಮಹಾತ್ಮ ಗಾಂಧಿ NREGAದ ಜಿಐಎಸ್ ಆಧಾರಿತ ಯೋಜನೆ ಮತ್ತು ಅನುಷ್ಠಾನದಲ್ಲಿ ಹವಾಮಾನ ಮಾಹಿತಿಯನ್ನು ಹುದುಗಿಸಲು CRISP-M ಉಪಕರಣವು ಸಹಾಯ ಮಾಡುತ್ತದೆ ಎಂದು ಹೇಳಿದರು.
ಯುಕೆ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಉಪಕರಣವನ್ನು ಅಭಿವೃದ್ಧಿಪಡಿಸುವಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಬೆಂಬಲಿಸಿದ ಎಲ್ಲಾ ಪಾಲುದಾರರಿಗೆ ಧನ್ಯವಾದ ಅರ್ಪಿಸಿದರು. CRISP-M ಅನುಷ್ಠಾನವು ಗ್ರಾಮೀಣ ಸಮುದಾಯಗಳಿಗೆ ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸಲು ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ಆಶಿಸಿದ್ದಾರೆ..
ಈ ಉಪಕರಣವನ್ನು ಏಳು ರಾಜ್ಯಗಳಲ್ಲಿ ಬಳಸಲಾಗುವುದು, ಇಲ್ಲಿ ವಿದೇಶಿ ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ, ಯುಕೆ ಸರ್ಕಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಜಂಟಿಯಾಗಿ ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ ಕೆಲಸ ಮಾಡುತ್ತವೆ. ಈ ರಾಜ್ಯಗಳೆಂದರೆ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ, ಒಡಿಶಾ ಮತ್ತು ರಾಜಸ್ಥಾನಗಳಾಗಿವೆ.
ಲಾರ್ಡ್ ತಾರಿಖ್ ಅಹ್ಮದ್ ಮಾತನಾಡಿ, ಮಹಾತ್ಮ ಗಾಂಧಿ NREGS ಕಾರ್ಯಕ್ರಮದ ಮೂಲಕ ಹವಾಮಾನ ಉಪಕ್ರಮವನ್ನು ಮುಂದುವರಿಸುವ ಭಾರತದ ಬದ್ಧತೆಯನ್ನು ಶ್ಲಾಘಿಸಿದರು. ಭಾರತದಾದ್ಯಂತ ಈ ಯೋಜನೆಯು ಸಕಾರಾತ್ಮಕ, ಜೀವನವನ್ನು ಬದಲಾಯಿಸುವ ಪರಿಣಾಮವನ್ನು ಹೊಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದು ಬಡ ಮತ್ತು ದುರ್ಬಲ ಜನರಿಗೆ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಮತ್ತು ಹವಾಮಾನ ಸಂಬಂಧಿತ ವಿಪತ್ತುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.