ಬೆಂಗಳೂರು: ಸರ್ಕಾರದ ಎಲ್ಲಾ ಸೇವೆಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ನವೀಕರಿಸಿದ ಮಾಹಿತಿಗಳ ಜೊತೆಗೆ ರೀಲಾಂಚ್ ಮಾಡಲಾಗಿದೆ.
ಪ್ರಸ್ತುತ ಈ ಪೋರ್ಟಲ್ ಗೆ ಯಾವುದೇ ರೀತಿಯ ಲಾಗಿನ್ ವ್ಯವಸ್ಥೆ ಇಲ್ಲ. ಜೊತೆಗೆ ಆರ್ಟಿಐ ಅರ್ಜಿ ಸಲ್ಲಿಸದೆಯೇ ರಾಜ್ಯ ಸರ್ಕಾರದ 157 ಸೇವೆಗಳ ಮಾಹಿತಿ ಪಡೆಯಬಹುದು. ಈ ಪೋರ್ಟಲ್ನಲ್ಲಿ ಈ ಹಿಂದೆ ಕೇವಲ 30 ಸ್ಕೀಂಗಳು ಮತ್ತು ಕೇವಲ 10 ಇಲಾಖೆಗಳ ಮಾಹಿತಿ ಮಾತ್ರವೇ ದೊರೆಯುತ್ತಿತ್ತು. ಈಗ ಶಿಕ್ಷಣ, ಎಸ್ಕಾಂ, ಮೆಟ್ರೋ, ಆರೋಗ್ಯ ಇಲಾಖೆ ಸೇರಿದಂತೆ 50 ಇಲಾಖೆಗಳ ಮಾಹಿತಿ ಪಡೆಯಬಹುದಾಗಿದೆ.
ಇದನ್ನು ಆಂತರಿಕವಾಗಿ ಇ – ಆಡಳಿತ ಇಲಾಖೆಯ ಪ್ರೋಗ್ರಾಮರ್ಗಳು ಅಭಿವೃದ್ಧಿ ಮಾಡಿದ್ದಾರೆ. ಈ ಪೋರ್ಟಲ್ ಸಾರ್ವಜನಿಕರಿಗೆ ನಿಯಮಿತವಾದ ಅಂತರದಲ್ಲಿ ಹೆಚ್ಚಿನ ಮಾಹಿತಿಗಳನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.