ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದ ಆರ್ಥಿಕತೆಯು 2021 ರಲ್ಲಿ ಶೇಕಡಾ 9.5 ಮತ್ತು 2022 ರಲ್ಲಿ ಶೇ 8.5 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಯು ಶೇಕಡಾ 7.3 ರಷ್ಟು ಕುಂಠಿತಗೊಂಡಿತ್ತು, ಇದು 2021 ರಲ್ಲಿ ಶೇಕಡಾ 9.5 ರಷ್ಟು ಮತ್ತು 2022 ರಲ್ಲಿ ಶೇಕಡಾ 8.5 ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯು ಮಂಗಳವಾರ ಬಿಡುಗಡೆ ಮಾಡಿದ ಇತ್ತೀಚಿನ ವರದಿ ತಿಳಿಸಿದೆ.
ಐಎಂಎಫ್ ಮತ್ತು ವಿಶ್ವಬ್ಯಾಂಕಿನ ವಾರ್ಷಿಕ ಸಭೆಗೂ ಮುನ್ನ ಬಿಡುಗಡೆಯಾದ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ಅಪ್ಡೇಟ್ ಪ್ರಕಾರ, ವಿಶ್ವವು 2021 ರಲ್ಲಿ ಶೇಕಡಾ 5.9 ಮತ್ತು 2022 ರಲ್ಲಿ ಶೇಕಡ 4.9 ಕ್ಕೆ ಬೆಳೆವಣಿಗೆ ಕಾಣುವ ನಿರೀಕ್ಷೆಯಿದೆ.
ಅಮೆರಿಕ ಈ ವರ್ಷ ಶೇಕಡಾ ಆರು ಮತ್ತು ಮುಂದಿನ ವರ್ಷ ಶೇಕಡಾ 5.2 ಕ್ಕೆ ಬೆಳೆವಣಿಗೆ ಕಾಣುವ ನಿರೀಕ್ಷೆಯಿದೆ.
ಮತ್ತೊಂದೆಡೆ, ಚೀನಾ 2021 ರಲ್ಲಿ 8 ಶೇಕಡಾ ಮತ್ತು 2022 ರಲ್ಲಿ ಶೇಕಡಾ 5.6 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.