ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವೂ ಮೊದಲ ಬಾರಿಗೆ ಒಂದು ವಿನೂತನ ಕಲ್ಪನೆಯಡಿಯಲ್ಲಿ ತನ್ನ ಐಡಲ್ ಎಸಿ ಕೋಚ್ಗಳಲ್ಲಿ ಚಾಕೋಲೇಟ್ಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಸಾಗಿಸಿತು.
ಕಳೆದ ಅಕ್ಟೋಬರ್ 8 ರಂದು ಗೋವಾದ ವಾಸ್ಕೋಡಗಾಮ ದಿಂದ ನವದೆಹಲಿಯ ಓಖ್ಲಾ ವರೆಗೆ 18 ಎಸಿ ಕೋಚ್ಗಳಲ್ಲಿ 163 ಟನ್ ತೂಕದ ಚಾಕೋಲೇಟ್, ನ್ಯೂಡಲ್ಸ್ಗಳನ್ನು ಸಾಗಿಸಲಾಗಿದೆ. ಇದಕ್ಕೆ ಸಾಗಾಣಿಕೆ ಸಮಯದಲ್ಲಿ ಕಡಿಮೆ ಮತ್ತು ನಿಯಂತ್ರಿತ ತಾಪಮಾನದ ಅಗತ್ಯತೆ ಇರುತ್ತದೆ.
ಈ ಎಸಿ ಪಾರ್ಸೆಲ್ ಕೋಚ್ ರೈಲು 2115 ಕಿಮೀ ದೂರವನ್ನು ಕ್ರಮಿಸಿ, ಶನಿವಾರ ನವದೆಹಲಿ ತಲುಪಿದೆ. ಈ ರೈಲು, ಇಲಾಖೆಗೆ 12.83 ಲಕ್ಷ ಆದಾಯವನ್ನು ತಂದುಕೊಟ್ಟಿದೆ. ಸಾಂಪ್ರದಾಯಿಕ ರಸ್ತೆಯ ಮೂಲಕ ಇದನ್ನು ಸಾಗಿಸಲಾಗಿದ್ದು, ಹುಬ್ಬಳ್ಳಿ ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕದ ಮಾರ್ಕೆಟಿಂಗ್ ಪ್ರಯತ್ನದಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.